ಬೆಳಗಾವಿ,ಡಿಸೆಂಬರ್,19,2025 (www.justkannada.in): ಬೆಳಗಾವಿ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಮತ್ತೆ ಸಿಎಂ ಕುರ್ಚಿ ವಿಚಾರದಲ್ಲಿ ಜಟಾಪಟಿ ನಡೆದಿದ್ದು ಈ ವೇಳೆ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಈಗ ನಾನೇ ಸಿಎಂ ಆಗಿದ್ದೇನೆ, ಮುಂದೆಯೂ ಎರಡುವರೆ ವರ್ ನಾನೇ ಸಿಎಂ ಆಗಿ ಇರುತ್ತೇನೆ ಎನ್ನುವ ಮೂಲಕ ಸಂದೇಶ ರವಾನಿಸಿದ್ದಾರೆ.
ಇಂದು ವಿಧಾನಸಭೆಯಲ್ಲಿ ತಾವೇ ಐದು ವರ್ಷದ ಸಿಎಂ ಎಂದು ಘೋಷಣೆ ಮಾಡುವಂತೆ ಸಿಎಂ ಸಿದ್ದರಾಮಯ್ಯಗೆ ಬಿಜೆಪಿ ನಾಯಕರು ಪಟ್ಟು ಹಿಡಿದರು. ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಈ ಹಿಂದೆ ನಾನು ಐದು ವರ್ಷ ಮುಖ್ಯಮಂತ್ರಿಯಾಗಿದ್ದೆ. ಈಗ ಮತ್ತೆ ಸಿಎಂ ಆಗಿದ್ದೇನೆ, ಈಗ ನಾನೇ ಮುಖ್ಯಮಂತ್ರಿ. ನನ್ನ ಪ್ರಕಾರ ಹೈಕಮಾಂಡ್ ನನ್ನ ಪರವಾಗಿದ್ದಾರೆ. ಅವರು ಹೇಳಿದಂತೆ ನಡೆದುಕೊಳ್ಳುತ್ತೇನೆ ಎಂದರು.
ನಾನು 5 ವರ್ಷಕ್ಕೆ ಸಿಎಂ ಆಗಿ ಆಯ್ಕೆಯಾಗಿದ್ದೇನೆ. ಹೈಕಮಾಂಡ್ ತೀರ್ಮಾನದ ಮೇಲೆ ಇದ್ದೇವೆ. ನಮ್ಮ ಪಕ್ಷದ ವಿಚಾರ. ನಾವು ತೀರ್ಮಾನ ಮಾಡುತ್ತೇನೆ. ಎರಡೂವರೆ ವರ್ಷ ಆಗಿದೆ. ಈಗ ನಾನೇ ಸಿಎಂ. ಮುಂದೆಯೂ ನಾನೇ ಇರುತ್ತೇನೆ” ಎಂದರು.
Key words: I am, CM Change, Session, BJP, CM Siddaramaiah







