ಬೆಳಗಾವಿ,ಡಿಸೆಂಬರ್,19,2025 (www.justkannada.in): ನನಗೆ ರಾಜಕೀಯ ನಿಶ್ಯಕ್ತಿ ಬರಲು ಸಾಧ್ಯವೇ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಸದನದಲ್ಲಿ ಹೇಳಿದರು.
ಇಂದು ವಿಧಾನಸಭೆಯಲ್ಲಿ ಉತ್ತರ ಕರ್ನಾಟಕ ಸಮಸ್ಯೆಗಳ ಕುರಿತ ಚರ್ಚೆಗೆ ಉತ್ತರ ನೀಡುತ್ತಾ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಿನ್ನೆ ಸ್ವಲ್ಪ ನಿಶ್ಯಕ್ತಿ ಕಾಡಿದ್ದ ಕಾರಣ ಉತ್ತರ ನೀಡಲಿಲ್ಲ ಎಂದರು. ಈ ವೇಳೆ ಮಧ್ಯೆ ಪ್ರವೇಶಿಸಿದ ವಿಪಕ್ಷ ನಾಯಕ ಆರ್.ಅಶೋಕ್ಮ ನಿಮಗೆ ಈಗ ಶಕ್ತಿ ಬಂದಿದೆಯಾ? ರಾಜಕೀಯ ಶಕ್ತಿ ಬಂದ ರೀತಿ ಕಾಣುತ್ತಿದೆ ಎಂದು ಕಾಲೆಳೆದರು.
ಇದಕ್ಕೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ನನಗೆ ರಾಜಕೀಯ ನಿಶ್ಯಕ್ತಿ ಬರಲು ಸಾಧ್ಯವೇ ಇಲ್ಲ,. ಅಂತಹ ಸಂದರ್ಭವೇ ಇಲ್ಲ . ಸಂದರ್ಭ ಬರುವುದು ಇಲ್ಲ. ನಾನು ಯಾವಾಗಲೂ ರಾಜಕೀಯವಾಗಿ ಶಕ್ತಿಯಾಗಿದ್ದೇನೆ. ಶಾರೀರಕ ನಿಶ್ಯಕ್ತಿ ಆಗಿತ್ತು ಅಷ್ಟೆ. ರಾಜಕೀಯ ನಿಶ್ಯಕ್ತಿ ಅಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
Key words: I can’t, possibly, feel, political exhaustion, CM Siddaramaiah







