ಬೆಳಗಾವಿ, ಡಿಸೆಂಬರ್, 10,2025 (www.justkannada.in): ನಿಜಲಿಂಗಪ್ಪನವರು ಒಬ್ಬ ದಕ್ಷ ,ಪ್ರಾಮಾಣಿಕ ವ್ಯಕ್ತಿ. ಕರ್ನಾಟಕ ಕಂಡ ಅಪರೂಪದ ರಾಜಕಾರಣಿಯಾಗಿದ್ದು ಕೊನೆಯವರೆಗೂ ಪ್ರಾಮಾಣಿಕವಾಗಿ ಇದ್ದವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಇಂದು ಮಾಜಿ ಮುಖ್ಯಮಂತ್ರಿ ದಿ. ಎಸ್. ನಿಜಲಿಂಗಪ್ಪರವರ ಜನ್ಮ ದಿನದ ಅಂಗವಾಗಿ ಸುವರ್ಣಸೌಧದಲ್ಲಿರುವ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ, ಪುಷ್ಪಾರ್ಚನೆ ಮಾಡಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.
ನಿಜಲಿಂಗಪ್ಪನವರು ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಹಾಗೂ ಅವಿಭಜಿತ ಕಾಂಗ್ರೆಸ್ ಪಕ್ಷದ ಎಐಸಿಸಿ ಅಧ್ಯಕ್ಷರಾಗಿದ್ದರು. ಪ್ರಧಾನಿ ಇಂದಿರಾ ಗಾಂಧಿಯವರೊಂದಿಗೆ ರಾಜಕೀಯ ಭಿನ್ನಾಭಿಪ್ರಾಯ ಬೆಳೆದು ಬೇರೆ ಬೇರೆ ಪಕ್ಷ ರಚಿಸಿದ್ದರು. ಭ್ರಷ್ಟಾಚಾರದ ವಿರುದ್ಧವಾಗಿದ್ದ ರಾಜಕಾರಣಿಯಾಗಿದ್ದರು ಎಂದರು.
ಪ್ರಾಮಾಣಿಕ, ಧೀಮಂತ ನಾಯಕನ ಆದರ್ಶಗಳು ನಮಗೆ ಮಾರ್ಗದರ್ಶಕ. ಕರ್ನಾಟಕದ ಏಕೀಕರಣಕ್ಕೂ ಅವರು ದುಡಿದಿದ್ದವರು. ಪ್ರಾಮಾಣಿಕ, ಧೀಮಂತ ನಾಯಕನ ಆದರ್ಶಗಳು ನಮಗೆ ಮಾರ್ಗದರ್ಶಕವಾಗಿವೆ . ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪನವರ ಹುಟ್ಟುಹಬ್ಬದಂದು ಸರ್ಕಾರ ಅವರನ್ನು ಸ್ಮರಿಸಿ ಗೌರವಿಸುತ್ತದೆ ಎಂದರು.
ಗ್ಯಾರಂಟಿಗಳ ಬಗ್ಗೆ ಸಿ ಎಲ್. ಪಿ ಯಲ್ಲಿ ಚರ್ಚೆಯೇ ಆಗಿಲ್ಲ
ಗ್ಯಾರಂಟಿ ಯೋಜನೆಗಳ ಪರಿಷ್ಕರಣೆಗೆ ಶಾಸಕರು ಮನವಿ ಮಾಡಿದರೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ಗ್ಯಾರಂಟಿಗಳ ಬಗ್ಗೆ ಸಿ ಎಲ್. ಪಿ ಯಲ್ಲಿ ಚರ್ಚೆಯೇ ಆಗಲಿಲ್ಲ ಎಂದರು.
ಚಾರ್ಚ್ ಶೀಟ್ ನ್ನು ನೋಡಿಲ್ಲ
ಧರ್ಮಸ್ಥಳದ ಅಸಹಜ ಸಾವುಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ರಚನೆಯಾಗಿದ್ದ ಎಸ್ ಐ ಟಿ ದೋಷಾರೋಪ ಪಟ್ಟಿಯಲ್ಲಿ ಷಡ್ಯಂತ್ರವಾಗಿದೆ ಎಂದು ಉಲ್ಲೇಖವಾಗಿರುವ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಚಾರ್ಚ್ ಶೀಟ್ ನ್ನು ಇನ್ನೂ ನೋಡಿಲ್ಲ ಎಂದರು.
ಪ್ರಧಾನಿಗಳಿಗೆ ಪತ್ರ
ತೊಗರಿಬೇಳೆಗೆ ಕನಿಷ್ಠ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿ ಪ್ರಧಾನಿಗಳಿಗೆ ಪತ್ರ ಬರೆದಿರುವುದಾಗಿ ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಹೈ ಕಮಾಂಡ್ ನಿರ್ಧಾರವೇ ಅಂತಿಮ
ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರೇ ಮುಂದುವರೆಯುವರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ ಪಕ್ಷದ ವರಿಷ್ಠರು ಸೂಚನೆಯೇ ಅಂತಿಮ ಎಂದರು.
Key words: S. Nijalingappa, rare politician, Karnataka, CM Siddaramaiah







