ನವೆಂಬರ್ ನಲ್ಲಿ ಸಿಎಂ ಆಗಿ ಡಿಕೆಶಿ ಪದಗ್ರಹಣ ಎಂಬ ಪ್ರಶ್ನೆ:  ಗರಂ ಆದ ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಅಕ್ಟೋಬರ್,31,2025 (www.justkannada.in):  ರಾಜ್ಯದಲ್ಲಿ ಸಿಎಂ ಬದಲಾವಣೆ, ಸಚಿವ ಸಂಪುಟ ಪುನಾರಚನೆ ವಿಚಾರ ಚರ್ಚೆ ಹಿನ್ನೆಲೆಯಲ್ಲಿ  ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಗರಂ ಆಗಿ ಉತ್ತರಿಸಿದ ಪ್ರಸಂಗ ನಡೆದಿದೆ.

ನವೆಂಬರ್ ನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುತ್ತಾರೆಯೇ..? ಎಂದು ಮಾಧ್ಯಮ ಪ್ರಶ್ನೆಗಳಿಗೆ ಕಿಡಿಕಾರಿದ ಸಿಎಂ ಸಿದ್ದರಾಮಯ್ಯ, ನಿಮಗೆ ಅವರು ಹೇಳಿದ್ರಾ..?  ನನಗೆ ಗೊತ್ತಿಲ್ಲ ನಿಮಗೆ ಯಾರು ಹೇಳಿದ್ರು ಎಲ್ಲಿ ಹೇಳಿದ್ದಾರೆ ಎಂದು ಮರು ಪ್ರಶ್ನಿಸಿದರು.

ನಿಮಗೆ ಹೇಗೆ ಗೊತ್ತಾಯ್ತು? ಯಾವ ಪತ್ರಿಕೆಯಲ್ಲಿ ಬಂದಿದೆ?  ನಾನು ದಿನನಿತ್ಯ ಪತ್ರಿಕೆ ಓದುತ್ತೇನೆ ನಾನು ಎಲ್ಲಾ ಪತ್ರಿಕೆಗಳನ್ನ ಓದುತ್ತೇನೆ ಯಾವ ಪತ್ರಿಯೆಲ್ಲೂ ಬಂದಿಲ್ಲ. ನಾನು ಎಲ್ಲೂ ನೋಡಿಲ್ಲ ಎಂದು ಸಿಎಂ ಸಿದ್ದರಾಮಗ್ಗ ಗರಂ ಆಗಿ ಉತ್ತರಿಸಿದರು.

Key words: DK Shivakumar, CM, November, CM Siddaramaiah