ಬೆಂಗಳೂರು,ಅಕ್ಟೋಬರ್,6,2025 (www.justkannada.in): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಹಾಗೂ ವಲಯ ಕಚೇರಿಗಳ ಬಳಕೆಗಾಗಿ 68 ಪರಿಸರ ಸ್ನೇಹಿ ಇವಿ ವಾಹನಗಳಿಗೆ ಚಾಲನೆ ನೀಡಿದರು.
ಈ ವೇಳೆಯಲ್ಲಿ ಅರಣ್ಯ ಮತ್ತು ಪರಿಸರ ಖಾತೆ ಸಚಿವ ಈಶ್ವರ್ ಖಂಡ್ರೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾದ ಶಾಸಕ ನರೇಂದ್ರಸ್ವಾಮಿ ಅವರು ಉಪಸ್ಥಿತರಿದ್ದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಒಟ್ಟು 68 ವಾಹನಗಳನ್ನು ಖರೀದಿಸಿದ್ದು, ಈ ವಾಹನಗಳನ್ನು ಮಂಡಳಿಯ ರಾಜ್ಯದ್ಯಾದಂತ ಇರುವ ಪ್ರಾದೇಶಿಕ ಕಛೇರಿ ಮತ್ತು ವಲಯ ಕಛೇರಿಗಳಿಗೆ ಹಂಚಿಕೆ ಮಾಡಲು ತೀರ್ಮಾನಿಸಿದೆ. ಒಟ್ಟು 68 ವಾಹನಗಳ ಖರೀದಿಯ ವೆಚ್ಚವು ರೂ. 7,67,25,498/ ಆಗಿದೆ.
ಮೆ. ಮಹೇಂದ್ರ & ಮಹೇಂದ್ರ ಸಂಸ್ಥೆಯಿಂದ 48 ಸಂಖ್ಯೆಯ ಬುಲೇರೋ ನಿಯೋ ಎನ್ 4 ಮತ್ತು ಎನ್ 10 ವಾಹನಗಳನ್ನು ಖರೀದಿಸಿದ್ದು, ಸದರಿ ವಾಹನಗಳನ್ನು ರಾಜ್ಯದ್ಯಾದಂತ ಇರುವ ಪ್ರಾದೇಶಿಕ ಕಛೇರಿ ಹಾಗೂ ಬೆಂಗಳೂರು ನಗರ ಹೊರತು ಪಡಿಸಿ ಇರುವ ವಲಯ ಹಿರಿಯ ಪರಿಸರ ಅಧಿಕಾರಿಗಳಿಗೆ ಹಂಚಿಕೆ ಮಾಡಲು ತೀರ್ಮಾನಿಸಿದೆ. ಬೆಂಗಳೂರು ನಗರದಲ್ಲಿ ವಾಹನಗಳಿಂದ ಹೊರಸೂಸುವ ಕಾರ್ಬನ್ ಡೈಆಕ್ಸೆಡ್ ಕಡಿಮೆ ಮಾಡುವ ಉದ್ದೇಶದಿಂದ 16 ಸಂಖ್ಯೆಯ ವಿದ್ಯುತ್ ಚಾಲಿತ ಮಹೀಂದ್ರ ಎಕ್ಸ್ ಯು ವಿ 400 ವಾಹನಗಳನ್ನು ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಂಡಳಿಯ ವಲಯ ಹಿರಿಯ ಪರಿಸರ ಅಧಿಕಾರಿಗಳಿಗೆ ಮತ್ತು ಕೇಂದ್ರ ಕಛೇರಿಯ ಅಧಿಕಾರಿಗಳ ಕಾರ್ಯಚಟುವಟಿಕೆಗಳಿಗೆ ಹಂಚಿಕೆ ಮಾಡಲು ಸರ್ಕಾರ ತೀರ್ಮಾನಿಸಿದೆ.
ಮುಂದುವರೆದಂತೆ, ಬೆಂಗಳೂರು ನಗರ ವ್ಯಾಪ್ತಿಯಲ್ಲಿ ವಾಯುಗುಣಮಟ್ಟ ಮಾಪನ ಮಾಡುವ ಸಲುವಾಗಿ 04 ಮಹೀಂದ್ರ & ಮಹೀಂದ್ರ ಸಂಸ್ಥೆಯ BS IV ಮೊಬೈಲ್ ವ್ಯಾನ್ ವಾಹನಗಳನ್ನು ಖರೀದಿಸಿದ್ದು, ಸದರಿ ವಾಹನಗಳಲ್ಲಿ Air Quality Monitoring Equipment ಗಳನ್ನು ಅಳವಡಿಸಿ ಬೆಂಗಳೂರು ನಗರದ್ಯಾದಂತ ಕಾರ್ಯನಿರ್ವಹಿಸುತ್ತಿರುವ 04 ಹಿರಿಯ ಪರಿಸರ ಅಧಿಕಾರಿಗಳ ಕಛೇರಿಗೆ ಹಂಚಿಕೆ ಮಾಡಲು ನಿರ್ಧರಿಸಿದೆ.
Key words: CM Siddaramaiah, 68 eco –friendly, EV vehicles, Karnataka State Pollution Control Board