ಬೆಂಗಳೂರು, ಅಕ್ಟೋಬರ್,1,2025 (www.justkannada.in): ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ಕೇಂದ್ರ ಸರ್ಕಾರದ ಮೂಲಕ ರಾಜ್ಯಕ್ಕೆ ಪರಿಹಾರ ಕೊಡಿಸಲಿ ಎಂದು ಸಿಎಂ ಸಿದ್ದರಾಮಯ್ಯ ಆಗ್ರಹಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, 2023ರಲ್ಲಿ ಬರಗಾಲ ಬಂದಾಗ ಸುಪ್ರೀಕೋರ್ಟ್ ಮೊರೆ ಹೋಗಿದ್ದವು. ಸುಪ್ರೀಂ ಕೋರ್ಟ್ ಮೂಲಕ ಪರಿಹಾರ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಬಂತು ಸುಪ್ರಿಂ ಕೋರ್ಟ್ ಬಾಗಿಲು ತಟ್ಟಿ ಪರಿಹಾರ ತೆಗೆದುಕೊಂಡೆವು. ಈಗ ಹೆಚ್ ಡಿಕೆ ಕೇಂದ್ರ ಸರ್ಕಾರದ ಮೂಲಕ ಪರಿಹಾರ ಕೊಡಿಸಲಿ ಪರಿಹಾರಕ್ಕಾಗಿ ನಾವು ಸಹ ಮನವಿ ಪತ್ರವನ್ನ ಕೊಡುತ್ತೇವೆ ಎಂದರು.
ಶೇ. 95 ರಷ್ಟು ಉತ್ತರ ಕರ್ನಾಟಕದಲ್ಲಿ ಪ್ರವಾಹ ಆಗಿದೆ. 8ರಿಂದ 9 ಜಿಲ್ಲೆಗಳಲ್ಲಿ ಪ್ರವಾಹ ಆಗಿದೆ. ಬೆಳಗಾವಿ ವಿಜಯಪುರ, ಬಾಗಲಕೋಟೆ, ಬೀದರ್, ಕಲಬುರುಗಿ ಧಾರವಾಡ, ಗದಗ ಜಿಲ್ಲೆಯಲ್ಲಿ ಪ್ರವಾಹ ಜಾಸ್ತಿಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ನುಡಿದರು.
Key words: HDK compensation, central government, CM Siddaramaiah