ಬೆಂಗಳೂರು ,ಸೆಪ್ಟಂಬರ್,18,2025 (www.justkannada.in): ಸೆಪ್ಟಂಬರ್ 22 ರಿಂದ ಜಾತಿಗಣತಿ ನಡೆಸಲು ಸರ್ಕಾರ ಮುಂದಾಗಿದ್ದು ಈ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿದ್ದು ಈ ವೇಳೆ ಸಿಎಂ ಸಿದ್ದರಾಮಯ್ಯ ಬೇಸರ ಹೊರ ಹಾಕಿದ್ದಾರೆ ಎನ್ನಲಾಗಿದೆ.
ಜಾತಿ ಗಣತಿಗೆ ಪರ ಮತ್ತು ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ, ಜಾತಿ ಗಣತಿ ಸಮೀಕ್ಷೆ ಕುರಿತಂತೆ ಇಂದು ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಂಪುಟ ಸಭೆಯಲ್ಲಿ ಸುಧೀರ್ಘವಾದ ಚರ್ಚೆ ನಡೆಯಿತು. ಸಭೆಯಲ್ಲಿ ಜಾತಿ ಗಣತಿ ಸಮೀಕ್ಷೆ ಮುಂದೊಡುವಂತೆ ಸಚಿವರು ಆಗ್ರಹಿಸಿದ್ದು ಜಾತಿ ಗಣತಿ ಮುಂದುವರಿಸಿದರೆ ಸರ್ಕಾರಕ್ಕೆ ತೊಂದರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರೆ ಕೆಲ ಸಚಿವರು ಜಾತಿಗಣತಿ ಸಮೀಕ್ಷೆ ನಡೆಸುವಂತೆ ತಿಳಿಸಿದ್ದಾರೆ ಎನ್ನಲಾಗಿದೆ.
ಇದೆ ವೇಳೆ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ನನ್ನ ವಿರುದ್ಧ ಅನಗತ್ಯ ಆರೋಪ ಮಾಡಲಾಗುತ್ತಿದೆ. ಹಿಂದುಳಿದ, ದಲಿತ, ಅಲ್ಪಸಂಖ್ಯಾತರ ಪರ ಅಂತ ಹೇಳುತ್ತಾರೆ. ಮೇಲ್ವರ್ಗದ ವಿರೋಧಿ ಎಂದು ನನ್ನನ್ನು ಬಿಂಬಿಸಲಾಗುತ್ತಿದೆ. ನನಗೆ ಜಾತಿವಾದಿ ಅಂತಾ ಪಟ್ಟ ಕಟ್ಟಲಾಗುತ್ತಿದೆ. ಜಾತಿಗಣತಿ ಸರ್ವೆ ಆರ್ಥಿಕ ಪರಿಸ್ಥಿತಿ ಎಂದು ಅರಿಯಲು ಜನರಿಗೆ ಹೇಗೆ ಮನವರಿಕೆ ಮಾಡುತ್ತೀರಿ? ಎಂದು ಬೇಸರ ವ್ಯಕ್ತಪಡಿಸಿದರು.
Key words: Cabinet Meeting, Caste census, CM Siddaramaiah