Saturday, September 5, 2026

BDA Apartments

Home Front Page ಬೇರೆ ಧರ್ಮದವರಿಗೆ ಕುಂಕುಮ ಇಟ್ಟಿಕೊಂಡು ಬನ್ನಿ ಅಂದ್ರೆ ಆಗುತ್ತಾ? ಬಿಜೆಪಿ ವಿರುದ್ದ ಸಿಎಂ ಸಿದ್ದರಾಮಯ್ಯ ಕಿಡಿ

ಬೇರೆ ಧರ್ಮದವರಿಗೆ ಕುಂಕುಮ ಇಟ್ಟಿಕೊಂಡು ಬನ್ನಿ ಅಂದ್ರೆ ಆಗುತ್ತಾ? ಬಿಜೆಪಿ ವಿರುದ್ದ ಸಿಎಂ ಸಿದ್ದರಾಮಯ್ಯ ಕಿಡಿ

ಮೈಸೂರು,ಸೆಪ್ಟಂಬರ್,2,2025 (www.justkannada.in): ನಾಡಹಬ್ಬ ದಸರಾ ಉದ್ಘಾಟಿಸಲು ಸಾಹಿತಿ ಬಾನು ಮುಷ್ತಾಕ್ ಕುಂಕುಮ ಇಟ್ಟುಕೊಂಡು ಬರಲಿ ಎಂದು ಹೇಳಿಕೆ ನೀಡಿದ್ದ ಬಿಜೆಪಿ ನಾಯಕರ ವಿರುದ್ದ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಈ ಕುರಿತು ಮೈಸೂರಿನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಾಡಹಬ್ಬದಲ್ಲಿ ಕುಂಕುಮ ಇಟ್ಟಿಕೊಂಡು ಬನ್ನಿ ಎಂದು ಬೇರೆ ಧರ್ಮದವರಿಗೆ ಹೇಳಿದರೆ ಆಗುತ್ತಾ..?  ಅವರ ಧರ್ಮದಲ್ಲಿ ಅರಿಸಿನ ಕುಂಕುಮ ಇಡಬಹುದಾ? ಬಾನು ಮುಷ್ತಾಕ್ ವಿರುದ್ದ ಯಾವುದೇ ಪತ್ವಾ ಹೊರಡಿಸಿಲ್ಲ ಈ ಬಗ್ಗೆ ಧರ್ಮಗುರುಗಳೇ ಸ್ಪಷ್ಟನೆ ನೀಡದ್ದಾರೆ  ಎಂದರು.

ಬಿಜೆಪಿಯವರು ಚಾಮುಂಡಿ ಚಲೋನಾದ್ರೂ ಮಾಡಲಿ ಏನಾದರೂ ಮಾಡಲಿ. ಮಹರಾಜರು ಮಿರ್ಜಾ ಇಸ್ಮಾಯಿಲ್ ರನ್ನ  ಅಂಬಾರಿ ಮೇಲೆ ಕೂರಿಸಿಕೊಂಡು ಬರುತ್ತಿದ್ದರು . 2017ರಲ್ಲಿ ನಿಸಾರ್ ಅಹ್ಮದ್ ಅವರು ದಸರಾ ಉದ್ಘಾಟಿಸಿದ್ದರು ಆಗ ಬಿಜೆಪಿಯವರು, ಆರ್ ಎಸ್ ಎಸ್ ನವರು ಎಲ್ಲಿಗೆ ಹೋಗಿದ್ರು ಎಂದು ಸಿಎಂ ಸಿದ್ದರಾಮಯ್ಯ ಟಾಂಗ್ ಕೊಟ್ಟರು.

Key words: Mysore dasara, Banu musthak, BJP, CM Siddaramaiah