ಬೇರೆ ಧರ್ಮದವರಿಗೆ ಕುಂಕುಮ ಇಟ್ಟಿಕೊಂಡು ಬನ್ನಿ ಅಂದ್ರೆ ಆಗುತ್ತಾ? ಬಿಜೆಪಿ ವಿರುದ್ದ ಸಿಎಂ ಸಿದ್ದರಾಮಯ್ಯ ಕಿಡಿ

ಮೈಸೂರು,ಸೆಪ್ಟಂಬರ್,2,2025 (www.justkannada.in): ನಾಡಹಬ್ಬ ದಸರಾ ಉದ್ಘಾಟಿಸಲು ಸಾಹಿತಿ ಬಾನು ಮುಷ್ತಾಕ್ ಕುಂಕುಮ ಇಟ್ಟುಕೊಂಡು ಬರಲಿ ಎಂದು ಹೇಳಿಕೆ ನೀಡಿದ್ದ ಬಿಜೆಪಿ ನಾಯಕರ ವಿರುದ್ದ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಈ ಕುರಿತು ಮೈಸೂರಿನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಾಡಹಬ್ಬದಲ್ಲಿ ಕುಂಕುಮ ಇಟ್ಟಿಕೊಂಡು ಬನ್ನಿ ಎಂದು ಬೇರೆ ಧರ್ಮದವರಿಗೆ ಹೇಳಿದರೆ ಆಗುತ್ತಾ..?  ಅವರ ಧರ್ಮದಲ್ಲಿ ಅರಿಸಿನ ಕುಂಕುಮ ಇಡಬಹುದಾ? ಬಾನು ಮುಷ್ತಾಕ್ ವಿರುದ್ದ ಯಾವುದೇ ಪತ್ವಾ ಹೊರಡಿಸಿಲ್ಲ ಈ ಬಗ್ಗೆ ಧರ್ಮಗುರುಗಳೇ ಸ್ಪಷ್ಟನೆ ನೀಡದ್ದಾರೆ  ಎಂದರು.

ಬಿಜೆಪಿಯವರು ಚಾಮುಂಡಿ ಚಲೋನಾದ್ರೂ ಮಾಡಲಿ ಏನಾದರೂ ಮಾಡಲಿ. ಮಹರಾಜರು ಮಿರ್ಜಾ ಇಸ್ಮಾಯಿಲ್ ರನ್ನ  ಅಂಬಾರಿ ಮೇಲೆ ಕೂರಿಸಿಕೊಂಡು ಬರುತ್ತಿದ್ದರು . 2017ರಲ್ಲಿ ನಿಸಾರ್ ಅಹ್ಮದ್ ಅವರು ದಸರಾ ಉದ್ಘಾಟಿಸಿದ್ದರು ಆಗ ಬಿಜೆಪಿಯವರು, ಆರ್ ಎಸ್ ಎಸ್ ನವರು ಎಲ್ಲಿಗೆ ಹೋಗಿದ್ರು ಎಂದು ಸಿಎಂ ಸಿದ್ದರಾಮಯ್ಯ ಟಾಂಗ್ ಕೊಟ್ಟರು.

Key words: Mysore dasara, Banu musthak, BJP, CM Siddaramaiah