ವೀರೇಂದ್ರ ಹೆಗ್ಗಡೆ ಅವರೇ SIT ಸ್ವಾಗತಿಸಿದ್ದಾರೆ: ಆದ್ರೆ ಬಿಜೆಪಿಯವರಿಂದ ಪ್ರತಿಭಟನೆ – ಸಿಎಂ ಸಿದ್ದರಾಮಯ್ಯ  

ಬೆಂಗಳೂರು,ಆಗಸ್ಟ್,22,2025 (www.justkannada.in):  ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರೇ ಎಸ್ ಐಟಿ ನಿರ್ಧಾರ ಸ್ವಾಗತಿಸಿದ್ದಾರೆ. ಆದರೆ ಬಿಜೆಪಿಯವರು ಬಿಜೆಪಿಯವರು ಒಪ್ಪುತ್ತಿಲ್ಲ. ಪ್ರತಿಭಟನೆಗೆ ಮುಂದಾಗಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು.

ಇಂದು ವಿಧಾನಸಭೆಯಲ್ಲಿ ಈ ಕುರಿತು ಚರ್ಚೆಯಾಗಿದ್ದು ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿಯವರು ಈಗ ಧರ್ಮಸ್ಥಳದ ಪರವಾಗಿ ಚಳುವಳಿ ಮಾಡುತ್ತಿದ್ದಾರೆ. ಧರ್ಮಸ್ಥಳದ ಹೆಗಡೆ ಅವರೇ ಎಸ್ ಐಟಿ ಸ್ವಾಗತಿಸಿದ್ದಾರೆ. ಆದರೆ ಇವರು ಹಿಡ್ಕೊಂಡು ಅಲ್ಲಾಡಿಸುತ್ತಿದ್ದಾರೆ.  ಎಸ್ ಐಟಿ ರಚನೆ ಮಾಡಿದಾಗ ಬಿಜೆಪಿ ಮಾತಾಡೇ ಇರಲಿಲ್ಲ. ಶೋಧ ಕಾರ್ಯ ವೇಳೇ ಒಂದು ಕಡೆ ಅಸ್ಥಿ ಪಂಜರ ಸಿಕ್ಕಿದೆ. ಆದಾದ ಮೇಲೆ ಗುಂಡಿಗಳಲ್ಲಿ ಏನು ಸಿಗದಿದ್ದಾಗ ಈಗ  ಬಿಜೆಪಿಯವರು ಶುರು ಮಾಡಿದ್ದಾರೆ ಎಂದು ಟೀಕಿಸಿದರು.

ಬಿಜೆಪಿಗರು ಮಾತ್ರ ಧರ್ಮಸ್ಥಳ ವಿಚಾರವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಎಸ್‌ಐಟಿ ರಚನೆ ಮಾಡಿದಾಗ ಬಿಜೆಪಿಯವರು ಮಾತಾಡೇ ಇರಲಿಲ್ಲ  ಎಂದು ಬಿಜೆಪಿಯ ಧರ್ಮಸ್ಥಳ ಚಳುವಳಿಗೆ ಸಿಎಂ ಸಿದ್ಧರಾಮಯ್ಯ ತಿರುಗೇಟು ನೀಡಿದರು.

Key words: Virender Hegde, Welcomed , SIT, BJP, protests, CM Siddaramaiah