ಮೈಸೂರು, ಜುಲೈ,18,2025 (www.justkannada.in): ಧರ್ಮಸ್ಥಳ ಅಪರಿಚಿತ ಶವದ ಪ್ರಕರಣ ಕುರಿತು ಎಸ್ ಐಟಿ ರಚನೆಗೆ ಮನವಿ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಎಸ್. ಐ.ಟಿ ಸದ್ಯಕ್ಕೆ ರಚನೆ ಆಗಲ್ಲ. ಯಾವುದೇ ಒತ್ತಡಕ್ಕೆ ಬಗ್ಗಲ್ಲ ಎಂದಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ , ಎಸ್ ಐಟಿ ಸದ್ಯಕ್ಕೆ ರಚನೆ ಆಗಲ್ಲ. ಯಾರೋ ಹೇಳಿದರು ಅಂತ ಎಸ್ ಐಟಿ ರಚನೆ ಮಾಡಲು ಸಾಧ್ಯವಿಲ್ಲ. ಪೊಲೀಸರು ಸದ್ಯ ತನಿಖೆ ನಡೆಸುತ್ತಿದ್ದಾರೆ. ತನಿಖೆ ಬಳಿಕ ಅಗತ್ಯವಿದ್ದರೆ ಎಸ್ ಐಟಿ ರಚನೆ ಮಾಡುತ್ತೇವೆ. ನಮಗೆ ಯಾರಿಂದಲೂ ಒತ್ತಡ ಬಂದಿಲ್ಲ. ಒತ್ತಡ ಬಂದರೂ ನಾವು ಕೇರ್ ಮಾಡಲ್ಲ ಎಂದು ನುಡಿದರು.
ಎತ್ತು ಇಯಿತು ಕಟ್ಟು ಕೊಟ್ಟಿಗೆಗೆ ಅಂತ ಆಗಲ್ಲ. ಎತ್ತು ಇಯೋದಿಲ್ಲ ಕೊಟ್ಟಿಗೆಗೆ ಕಟ್ಟೋಕೂ ಆಗಲ್ಲ. ಪೊಲೀಸರು ಎಸ್ ಐಟಿ ಅಗತ್ಯವಿದೆ ಅಂತ ವರದಿ ಕೊಟ್ಟರೆ ರಚನೆ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಆರ್ ಸಿಬಿ ಕಾಲ್ತುಳಿತ ಪ್ರಕರಣ ಖುನ್ನಾ ವರದಿ ಬಗ್ಗೆ ನನಗೆ ಗೊತ್ತಿಲ್ಲ. ಕ್ಯಾಬಿನೆಟ್ ಮೀಟಿಂಗ್ ಬಳಿಕ ಈ ಬಗ್ಗೆ ಮಾತನಾಡುತ್ತೇನೆ. ಎಲ್ಲಾ ಪ್ರತಿಗಳನ್ನ ಸಚಿವರಿಗೆ ಕೊಟ್ಟಿದ್ದಾರೆ. ಈ ಬಗ್ಗೆ ಸಚಿವರ ಜೊತೆಯೂ ಚರ್ಚೆ ಮಾಡಬೇಕು. ಈ ಕುರಿತು ಪರಿಶೀಲನೆ ನಡೆಸಿ ಪ್ರತಿಕ್ರಿಯೆ ನೀಡುತ್ತೇನೆ ಎಂದರು.
ಸಮಾವೇಶದ ಬಗ್ಗೆ ಬಿಜೆಪಿ ಟೀಕೆಗೆ ಟಾಂಗ್
ನಾಳೆ ಮೈಸೂರಿನಲ್ಲಿ ನಡೆಯುವ ಕಾಂಗ್ರೆಸ್ ಸಾಧನಾ ಸಮಾವೇಶದ ಬಗ್ಗೆ ಟೀಕಿಸಿದ ಬಿಜೆಪಿಗೆ ಟಾಂಗ್ ಕೊಟ್ಟ ಸಿಎಂ ಸಿದ್ದರಾಮಯ್ಯ, ಸರ್ಕಾರದ ಸಾಧನೆ ಜನರಿಗೆ ತಿಳಿಸಲು ಸಮಾವೇಶ ಮಾಡುತ್ತಿದ್ದೇವೆ. ಏನೆಲ್ಲಾ ಅನುದಾನ ಕೊಟ್ಟಿದ್ದೇವೆ ಅಂತ ಜನರಿಗೆ ತಿಳಿಸಬೇಕು. ಸಾವಿರಾರು ಕೋಟಿ ಹಣ ಅಭಿವೃದ್ಧಿಗೆ ಕೊಟ್ಟಿದ್ದೇವೆ. ಈ ಬಗ್ಗೆ ಜನರಿಗೆ ಗೊತ್ತಾಗಬೇಕು ಈ ನಿಟ್ಟಿನಲ್ಲಿ ಸಮಾವೇಶ ನಡೆಯುತ್ತಿದೆ ಎಂದರು.
ಬಿಜೆಪಿ ಅವರು ದಲಿತ ಪ್ರಧಾನಿ ಮಾಡಲಿ
ರಾಜ್ಯದಲ್ಲಿ ಸಿಎಂ ಸ್ಥಾನಕ್ಕೆ ದಲಿತರನ್ನು ಆಯ್ಕೆ ಮಾಡುವ ವಿಚಾರ, ಬಿಜೆಪಿ ಅವರು ದಲಿತ ಪ್ರಧಾನಿ ಮಾಡಲಿ. ಕಾಂಗ್ರೆಸ್ ಪಕ್ಷ ದಲಿತರಿಗೆ ಎಲ್ಲವನ್ನೂ ನೀಡಿದೆ. ಈ ದೇಶದಲ್ಲಿ ಸಂವಿಧಾನಾತ್ಮಕವಾಗಿ ಇರುವ ಪಕ್ಷ ಕಾಂಗ್ರೆಸ್ ಮಾತ್ರ. ವಿಜಯೇಂದ್ರ ದಲಿತರನ್ನು ಅಧ್ಯಕ್ಷರನ್ನಾಗಿ ಮಾಡಲಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
Key words: Dharmasthala, Murder, No SIT, formed, CM Siddaramaiah