Friday, October 16, 2026

Dasara Wishes

ಮಾವಿಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹ: ಇಂದು ಕೋಲಾರ ಬಂದ್ DasraWishes_JK DasraWishes JK
Happy Dasara
Home Front Page ನಾನು ಡಿಕೆಶಿ ಚೆನ್ನಾಗಿ ಇದ್ದೇವೆ: ನಮ್ಮ ಸರ್ಕಾರ 5 ವರ್ಷ ಬಂಡೆ ರೀತಿ ಸುಭದ್ರ-ಸಿಎಂ ಸಿದ್ದರಾಮಯ್ಯ

ನಾನು ಡಿಕೆಶಿ ಚೆನ್ನಾಗಿ ಇದ್ದೇವೆ: ನಮ್ಮ ಸರ್ಕಾರ 5 ವರ್ಷ ಬಂಡೆ ರೀತಿ ಸುಭದ್ರ-ಸಿಎಂ ಸಿದ್ದರಾಮಯ್ಯ

ಮೈಸೂರು,ಜೂನ್,30,2025 (www.justkannada.in): ಮೂರು ತಿಂಗಳಲ್ಲಿ ಈ ಸರ್ಕಾರ ಬಿದ್ದು ಹೋಗುತ್ತದೆ ಎಂದು ಹೇಳಿಕೆ ನೀಡಿದ್ದ ಬಿಜೆಪಿಗೆ ಟಾಂಗ್ ಕೊಟ್ಟಿರುವ ಸಿಎಂ ಸಿದ್ದರಾಮಯ್ಯ, ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸಿಮರು. ನಾನು ಡಿಕೆ ಶಿವಕುಮಾರ್ ಚೆನ್ನಾಗಿಯೇ ಇದ್ದೇವೆ. ನಮ್ಮ ಸರ್ಕಾರ ಬಂಡೆಯಂತೆ ಸುಭದ್ರ ಎಂದು ತಿಳಿಸಿದರು.

ಇಂದು ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ ಸಿಎಂ ಸಿದ್ದರಾಮಯ್ಯ, ನಾನು  ಡಿಸಿಎಂ ಡಿಕೆ ಶಿವಕುಮಾರ್ ಚೆನ್ನಾಗಿಯೇ ಇದ್ದೇವೆ ಈ ಸರ್ಕಾರ 5 ವರ್ಷ ಬಂಡೆ ರೀತಿ ಸುಭದ್ರವಾಗಿ ಇರುತ್ತದೆ ಎಂದು ಡಿಕೆ ಶಿವಕುಮಾರ್ ಅವರ ಕೈ ಹಿಡಿದು ಮೇಲೆಕೆತ್ತಿ ಬಿಜೆಪಿಗೆ ತಿರುಗೇಟು ನೀಡಿದರು.

ನಾನೇ ದಸರಾ ಉದ್ಘಾಟನೆ ಮಾಡುತ್ತೇನೆ ಅಂತಾ ನಿಮಗೆ ಅನ್ನಿಸುತ್ತಿಲ್ಲವಾ?  ನಾವು ಒಗ್ಗಟ್ಟಾಗಿ ಇದ್ದೇವೆ. ಮುಂದೆಯೂ ಇರುತ್ತೇವೆ. ನಮ್ಮ ಬಗ್ಗೆ ಮಾತನಾಡುವ  ಶ್ರೀರಾಮುಲು ಎಷ್ಟು ಸಲ ಸೋತಿದ್ದಾರೆ ಹೇಳಿ ಆಗ ಶ್ರೀರಾಮುಲುಗೆ ತಮ್ಮ ಭವಿಷ್ಯ ಗೊತ್ತಿರಲಿಲ್ಲವಾ ..? ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು.vtu

Key words: DK Shivakumar, government, 5 years, Mysore, CM, Siddaramaiah