ಮೈಸೂರು,ಜೂನ್,9,2025 (www.justkannada.in): ಮೋದಿ ಸರ್ಕಾರಕ್ಕೆ 11 ವರ್ಷ ತುಂಬಿದೆ ಅಷ್ಟೇ. ಏನೂ ಕೆಲಸ ಮಾಡಿಲ್ಲ. ಮೋದಿ ಸರ್ಕಾರಕ್ಕೆ ಜೀರೋ ಮಾರ್ಕ್ಸ್ ನೀಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮೋದಿ ಪ್ರಚಾರಕ್ಕೆ ಇರೋದು. ಡಿ ಮಾನೀಟೈಜೇಶನ್ ಮಾಡಿದರು. ಅದರಿಂದ ಏನಾದರೂ ಅನುಕೂಲ ಆಗಿದೆಯಾ? ಅಚ್ಚೆ ದಿನ್ ಆಯೆಗಾ ಅಂದರು. ಅಚ್ಚೆ ದಿನ್ ಬಂತ ? ರೈತರ ಸಮಸ್ಯೆ ಬಗೆಹರಿಸುತ್ತೇನೆ ಅಂದರು. ಡೆಲ್ಲಿ ರೈತರು 1 ವರ್ಷ ಚಳುವಳಿ ಮಾಡಿದರೂ ಏನು ಮಾಡಿಲ್ಲ. ಮೋದಿ ಹೇಳಿದ್ದು ಒಂದು ಕೂಡ ಮಾಡಲಿಲ್ಲ 11 ವರ್ಷ ತುಂಬಿದೆ ಅಷ್ಟೇ. ಮಾಧ್ಯಮದವರು ಅವರಿಗೆ ಹೆಚ್ಚಿನ ಪ್ರಚಾರ ಕೊಡುತ್ತಾರೆ ಅಷ್ಟೇ ಎಂದು ಟೀಕಿಸಿದರು.
ಗ್ಯಾರಂಟಿ ಘೋಷಣೆ ಮಾಡಿದಾಗ ನಮ್ಮನ್ನು ವಿರೋಧ ಮಾಡಿದರು. ಆ ಮೇಲೆ ನಮ್ಮನ್ನು ಕಾಪಿ ಮಾಡಿದರು. ಮಧ್ಯಪ್ರದೇಶ, ದೆಹಲಿ, ಯುಪಿ ಎಲ್ಲಾ ಕಡೆ ನಮ್ಮ ಗ್ಯಾರೆಂಟಿ ಕಾಪಿ ಆಯಿತು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 5300 ಕೋಟಿ ಕೊಡುತ್ತೇನೆ ಅಂತ ಹೇಳಿದರು. ಆದರೆ ಕೊಡಲಿಲ್ಲ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ. ಬಿಜೆಪಿ ಅವರು ಏನು ಪ್ರಶ್ನೆ ಮಾಡುತ್ತಿಲ್ಲ. ಮೋದಿ ಸರ್ಕಾರದಲ್ಲಿ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
Key words: Zero marks, Modi government, CM, Siddaramaiah