ಯಾರೇ ಪಾಕ್ ಪರ ಘೋಷಣೆ ಕೂಗಿದ್ರೂ ತಪ್ಪು: ತನಿಖೆ ಮಾಡಿ ಸೂಕ್ತ ಕ್ರಮ- ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಏಪ್ರಿಲ್,30,2025 (www.justkannada.in):  ಮಂಗಳೂರಿನಲ್ಲಿ ಪಾಕ್ ಪರ ಘೋಷಣೆ ಕೂಗಿದ್ದಕ್ಕೆ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿರುವ ಘಟನೆ ಕುರಿತು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿದ ಸಿಎಂ ಸಿದ್ದರಾಮಯ್ಯ, ಯಾರೇ ಪಾಕ್ ಪರ ಘೊಣೆ ಕೂಗಿದರೂ ತಪ್ಪು ತನಿಖೆ ಮಾಡಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ.  ಆರೋಪಿಗಳು ಯಾರೇ ಆಗಿದ್ದರೂ ಅವರ ವಿರುದ್ದ ಕ್ರಮ ಖಚಿತ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವತ್ತು ಜನರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ಏ. 27 ರಂದು ಪಾಕಿಸ್ತಾನದ ವಿರುದ್ದ ಘೋಷಣೆ ಕೂಗಿದ್ದಕ್ಕೆ ಸ್ಥಳೀಯರ ಗುಂಪು  ಘೋಷಣೆ ಕೂಗಿದ್ದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿತ್ತು. ಬಳಿಕ  ಆ ವ್ಯಕ್ತಿ ಮೃತಪಟ್ಟಿದ್ದು ಆತನ ಮೃತದೇಹ ಪತ್ತೆಯಾಗಿತ್ತು. ಮೃತ ಆರೋಪಿಯು ಕೇರಳದ ವಯನಾಡಿನ ಪುಲ್ಪಳಿ ನಿವಾಶಿ ಅಶ್ರಫ್‌ ಎಂದು ತಿಳಿದುಬಂದಿದೆ.

Key words: pro-Pak, slogan, Investigate, appropriate action, CM Siddaramaiah