ಸಾಯುವವರೆಗೆ ನೀವೇ ಸಿಎಂ ಆಗಿರಿ, ಆದ್ರೆ ಜನ ನಿಮ್ಮನ್ನು ಆಯ್ಕೆ ಮಾಡಬೇಕು ಅಲ್ವಾ-ಡಿಕೆಶಿ, ಸಿದ್ಧರಾಮಯ್ಯಗೆ  ಕೆ.ಎಸ್ ಈಶ್ವರಪ್ಪ ಟಾಂಗ್

ಶಿವಮೊಗ್ಗ,ಜುಲೈ,20,2022(www.justkannada.in):  ಸಿಎಂ ಅಭ್ಯರ್ಥಿ ಸ್ಥಾನಕ್ಕಾಗಿ ಕಾಂಗ್ರೆಸ್ ನಲ್ಲಿ ಈಗಿನಿಂದಲೇ ಮುಸುಕಿನ ಗುದ್ದಾಟ ಶುರುವಾಗಿದ್ದು ಈ ಕುರಿತು ಲೇವಡಿ ಮಾಡಿರುವ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ, ಸಾಯುವವರೆಗೆ ನೀವೇ ಸಿಎಂ ಆಗಿರಿ, ಆದ್ರೆ ಜನ ನಿಮ್ಮನ್ನು ಆಯ್ಕೆ ಮಾಡಬೇಕು ಅಲ್ವಾ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ಧರಾಮಯ್ಯಗೆ ಟಾಂಗ್ ನೀಡಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಯಾರು ಸಿಎಂ ಆಗ್ಬಾರ್ದು ಅಂತಾ ಹೇಳಿಲ್ಲ. ನಿಶ್ಚಿತಾರ್ಥ ಆಗಿಲ್ಲ. ಮದುವೆ ಆಗಿಲ್ಲ. ಮಗು ಆಗಿಲ್ಲ, ಆದರೆ, ಇಬ್ಬರೂ ನಾನೇ ಅಪ್ಪ, ನಾನೇ ಅಪ್ಪ ಎಂದು ಹೇಳುತ್ತಿದ್ದಾರೆ. ಫಸ್ಟ್ ಜನ ನಿಮ್ಮನ್ನು ಗುರುತಿಸಿ, ಆಯ್ಕೆ ಮಾಡಲಿ. ನಿಮ್ಮ ಪಾರ್ಟಿ ಅಧಿಕಾರಕ್ಕೆ ತಂದಾಗ ಯಾರು ಮುಖ್ಯಮಂತ್ರಿ ನಂತರ ನೋಡಿ. ಎಲ್ಲಾ ಚುನಾವಣೆ ಸೋತಿದ್ದೀರಿ, ಸರ್ಕಾರ ಕಳೆದುಕೊಂಡಿದ್ದೀರಿ. ಆದರೂ, ನೀವೀಬ್ಬರೂ ಕನಸು ಕಾಣುತ್ತಿದ್ದೀರಿ ಎಂದು ಟೀಕಿಸಿದರು.

ಮೊದಲು ನೀವು ಸ್ಫರ್ಧಿಸುವ ಕ್ಷೇತ್ರ ಯಾವುದು, ಕ್ಷೇತ್ರ ತೀರ್ಮಾನ ಮಾಡಿದ್ರೂ, ಅಲ್ಲಿನ ಜನ ಒಪ್ಪುತ್ತಾರಾ ಗೇಲ್ತಿರಾ ಸೋಲ್ತಿರಾ ಅದನ್ನ ಯೋಚಿಸಿ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲದೇ ನಾನೇ ಸಿಎಂ ಎನ್ನುತ್ತಿದ್ದೀರಿ. ಒಕ್ಕಲಿಗರೆಲ್ಲಾ ನನ್ ಜೊತೆ ನಿಂತುಕೊಳ್ಳಿ ಎಂದು ಡಿಕೆ ಶಿವಕುಮಾರ್ ಹೇಳುತ್ತಾರೆ. ಜಾತಿವಾದಿ ಪಕ್ಷ, ಜಾತಿ ಮೇಲೆ ಸಿಎಂ ಆಗೋಕೆ ಕೇಳ್ತಾರಲ್ಲಾ ನಾಚಿಕೆಯಾಗಬೇಕು. ಸಿದ್ದರಾಮಯ್ಯ ಬಿಡಿ ಅವರು ಜಾತಿವಾದಿನೇ. ಎಷ್ಟು ಬೈದ್ರೂ ಅಷ್ಟೇ ಎಂದು ವಾಗ್ದಾಳಿ ನಡೆಸಿದರು.

Key words: CM-position-Siddaramaiah-dk shivakumar-KS Eshwarappa