ಸಿಎಂ ಸ್ಥಾನ ಡಿಕೆ ಶಿವಕುಮಾರ್ ಗೆ ಬಿಟ್ಟುಕೊಡಿ: ವೇದಿಕೆ ಮೇಲೆಯೇ ಸಿದ್ದರಾಮಯ್ಯಗೆ ಮನವಿ ಮಾಡಿದ ಚಂದ್ರಶೇಖರ ಶ್ರೀ

ಬೆಂಗಳೂರು,ಜೂನ್,27,2024 (www.justkannada.in): ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಹೆಚ್ಚುವರಿ ಡಿಸಿಎಂ ಹುದ್ದೆಗೆ ಬೇಡಿಕೆ ಚರ್ಚೆಯಾಗುತ್ತಿರುವ ಬೆನ್ನಲ್ಲೆ ಇದೀಗ ಡಿಕೆ ಶಿವಕುಮಾರ್ ಗೆ ಸಿಎಂ ಸ್ಥಾನ ನೀಡುವಂತೆ ಮನವಿ ಕೇಳಿ ಬಂದಿದೆ.

ಹೌದು ಡಿಸಿಎಂ ಡಿಕೆ ಶಿವಕುಮಾರ್ ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವಂತೆ ಸಿಎಂ ಸಿದ್ದರಾಮಯ್ಯಗೆ ವಿಶ್ವ ಒಕ್ಕಲಿಗ ಮಹಾಸಂಸ್ಥಾನದ ಮಠದ ಚಂದ್ರಶೇಖರ ಶ್ರೀ ಮನವಿ ಮಾಡಿದ್ದಾರೆ.

ಕೆಂಪೇಗೌಡ ಜಯಂತಿ ಆಚರಣೆಯ ವೇದಿಕೆಯಲ್ಲೇ ಮಾತನಾಡಿರುವ ಮಹಾಸಂಸ್ಥಾನದ ಮಠದ ಚಂದ್ರಶೇಖರ ಶ್ರೀ, ನಿಮಗೆ ಅನುಭವವಿದೆ. ಈಗ ಡಿಕೆ ಶಿವಕುಮಾರ್ ಗೆ ಅವಕಾಶ ಮಾಡಿಕೊಡಿ.  ಸಿದ್ದರಾಮಯ್ಯ  ಮನಸ್ಸು ಮಾಡಿದ್ರೆ ಮಾತ್ರ ಇದು ಸಾಧ್ಯ.  ಸಿಎಂ ಸ್ಥಾನವನ್ನ ಡಿಕೆ ಶಿವಕುಮಾರ್ ಗೆ ಬಿಟ್ಟುಕೊಡಿ ಎಂದು ಒತ್ತಾಯಿಸಿದ್ದಾರೆ.

ವೇದಿಕೆ ಮೇಲೆಯೇ ಬೇಡಿಕೆ ಇಟ್ಟ ಚಂದ್ರಶೇಖರ ಶ್ರೀ,  ಡಿಕೆ ಶಿವಕುಮಾರ್ ರನ್ನ ದಯವಿಟ್ಟು ಸಿಎಂ ಮಾಡಿ. ಡಿಕೆಶಿ ಒಬ್ಬರು ಮಾತ್ರ ಸಿಎಂ ಆಗಿಲ್ಲ. ಸಿದ್ದರಾಮಯ್ಯಗೆ ನಾನು ನಮಸ್ಕಾರ ಮಾಡ್ತೇನೆ ದಯವಿಟ್ಟು ಸಿಎಂ ಮಾಡಿ ಎಂದು ಮನವಿ ಮಾಡಿದ್ದಾರೆ.

Key words: CM, position, DK Shivakumar, Siddaramaiah