ಜೆಡಿಎಸ್ ಸೇರ್ಪಡೆ ಕುರಿತು ಸುಳಿವು ನೀಡಿದ್ರಾ ಸಿಎಂ ಇಬ್ರಾಹಿಂ….

ಬೆಂಗಳೂರು,ಜನವರಿ21,2021(www.justkannada.in):   ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ಜೆಡಿಎಸ್ ಸೇರ್ಪಡೆಯಾಗುವ ಬಗ್ಗೆ ಸುದ್ಧಿ ಹರಡಿತ್ತು. ಇದೀಗ ಈ ಬಗ್ಗೆ ಸ್ವತಃ ಸಿಎಂ ಇಬ್ರಾಹಿಂ ಅವರೇ ಸುಳಿವು ನೀಡಿದ್ದಾರೆ.jk-logo-justkannada-mysore

ಹೌದು, ಜೆಡಿಎಸ್ ಸೇರ್ಪಡೆ ವಿಚಾರ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಇಬ್ರಾಹಿಂ,  ಜೆಡಿಎಸ್ ಗೆ ಹೋಗಿ ಏನೋ ಆಗಬೇಕು ಎಂದು ಹೋಗುತ್ತಿಲ್ಲ.ನನಗೇನು ಆಗಬೇಕು ಎಂದು ಜೆಡಿಎಸ್ ಗೆ ಹೋಗುತ್ತಿಲ್ಲ. ಜನತಾ ಪರಿವಾರ ಒಗ್ಗೂಡಿಸುವ ಉದ್ದೇಶದಿಂದ ಜೆಡಿಎಸ್ ಗೆ ಹೋಗುತ್ತೇನೆ ಎಂದು ತಿಳಿಸಿದ್ದಾರೆ.cm-ibrahim-hints-jds-join

ಹಾಗೆಯೇ ಪ್ರಭಾಕರ್ ಕೋರೆ, ಉಮೇಶ್ ಕತ್ತಿ ಭೇಟಿಯಾಗಿದ್ದಾರೆ. ನಮ್ಮ ಟ್ರೈನ್  ಇನ್ನು ಶುರು ಮಾಡಿಲ್ಲ. ಶುರುವಾದ ನಂತರ ಹತ್ತಿಕೊಳ್ಳವವರು ಬಂದು ಹತ್ತಿಕೊಳ್ಳುತ್ತಾರೆ. ನಾವು ಸಾಬ್ರು  ಹೊಸಗಾಡಿ ತೆಗೆದುಕೊಳ್ಳುವುದಿಲ್ಲ. ಹಳೆ ಗಾಡಿಯನ್ನೇ ರೆಡಿ ಮಾಡಿಸಿಕೊಳ್ಳುತ್ತೇವೆ  ಎಂದು ವ್ಯಂಗ್ಯವಾಡಿದರು.

Key words: CM- Ibrahim- hints – JDS -join