ಸಿಎಂ ಇಬ್ರಾಹಿಂ ಚಲಾವಣೆಯಲ್ಲಿರುವಂತಹ ನಾಣ್ಯ: ಬಿಜೆಪಿಗೆ ಬಂದ್ರೆ ಬೇಡ ಅನ್ನಲ್ಲ- ಸಚಿವ ಶ್ರೀರಾಮುಲು.

ಬೆಂಗಳೂರು,ಜನವರಿ,27,2022(www.justkannada.in):  ಪರಿಷತ್ ವಿಪಕ್ಷ ಸ್ಥಾನ ಕೈತಪ್ಪಿದ ಬೆನ್ನಲ್ಲೆ ಪರಿಷತ್ ಸದಸ್ಯ  ಸಿಎಂ ಇಬ್ರಾಹಿಂ ಅವರು ಕಾಂಗ್ರೆಸ್ ಗೆ ಗುಡ್ ಬೈ ಹೇಳಿ ಬೇರೆ ಪಕ್ಷಕ್ಕೆ ಸೇರಲು ನಿರ್ಧರಿಸಿರುವ ಕುರಿತು ಸಚಿವ ಶ್ರೀರಾಮುಲು ಪ್ರತಿಕ್ರಿಯಿಸಿದ್ದಾರೆ.

ಸಿಎಂ ಇಬ್ರಾಹಿಂ ಬಿಜೆಪಿಗೆ ಬಂದರೆ ಬೇಡ ಅನ್ನಲ್ಲ.  ಸಿಎಂ ಇಬ್ರಾಹಿಂಗೆ ವ್ಯಾಲ್ಯು ಇದೆ .  ಇಬ್ರಾಹಿಂ ಚಲಾವಣೆಯಲ್ಲಿರುವಂತಹ ನಾಣ್ಯ.  ಇಬ್ರಾಹಿಂರನ್ನ ಬಿಜೆಪಿ ಕರೆತರಲು ಮಾತನಾಡುತ್ತೇನೆ ಎಂದು ಸಚಿವ  ಶ್ರೀರಾಮುಲು ಹೇಳಿಕೆ ನೀಡಿದ್ದಾರೆ.

ಕಾಂಗ್ರೆಸ್ ತೊರೆಯಲು ನಿರ್ಧರಿಸಿರುವ ಸಿಎಂ ಇಬ್ರಾಹಿಂ ಅವರ ಜತೆ ಈಗಾಗಲೇ ಹೆಚ್.ಡಿ ಕುಮಾರಸ್ವಾಮಿ  ಕರೆ ಮಾಡಿ ಮಾತನಾಡಿದ್ದಾರೆ. ಇನ್ನು ದೇವೇಗೌಡರ ಜತೆ ಮಾತನಾಡಿ ಮುಂದಿನ ನಿರ್ಧಾರ ಮಾಡುತ್ತೇನೆ ಎಂದು ಸಿಎಂ ಇಬ್ರಾಹಿಂ ಹೇಳಿದ್ದು ಸದ್ಯ ಜೆಡಿಎಸ್ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ.

Key words: CM Ibrahim- BJP- Minister- Sriramulu