ರಾಜ್ಯದಲ್ಲಿ ಸಮರ್ಥ ಆಡಳಿತ ಪಕ್ಷವೂ ಇಲ್ಲ. ವಿಪಕ್ಷವೂ ಇಲ್ಲ- ಸಿಎಂ ಇಬ್ರಾಹಿಂ

ಬೆಂಗಳೂರು,ಡಿಸೆಂಬರ್,13,2025 (www.justkannada.in): ರಾಜ್ಯದಲ್ಲಿ ಸಮರ್ಥ ಆಡಳಿತ ಪಕ್ಷವೂ ಇಲ್ಲ. ಸಮರ್ಥ ವಿಪಕ್ಷವೂ ಇಲ್ಲ ಎಂದು ಮಾಜಿ ಸಚಿವ ಸಿಎಂ ಇಬ್ರಾಹಿಂ ಟೀಕಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಇಬ್ರಾಹಿಂ, ಬಾದಾಮಿ ಕ್ಷೇತ್ರದಲ್ಲಿ ಸಿದ್ದರಾಮಯ್ಯರನ್ನ ಗೆಲ್ಲಿಸಿದ್ದು ನಾನೇ.  ರಾಜ್ಯದಲ್ಲಿ ಸಮರ್ಥ ಆಡಳಿತ ಪಕ್ಷವೂ ಇಲ್ಲ. ಸಮರ್ಥವಾಗಿ ವಿಪಕ್ಷವೂ ಇಲ್ಲ. ಇದೀಗ ರಾಜ್ಯ ಸರ್ಕಾರದ ಪರಿಸ್ಥಿತಿ ಪಾಂಚಾಲಿಯ ರೀತಿ ಆಗಿದೆ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ನಲ್ಲಿ ಕುರ್ಚಿಗಾಗಿ ಕಿತ್ತಾಟ ನಡೆಯುತ್ತಿದೆ.  ರೈತರು, ಕಾರ್ಮಿಕರಿಗಾಗಿ ಧ್ವನಿ ಎತ್ತಲು ತೃತಿಯರಂಗ ಬೇಕಿದೆ. ಕಾಂಗ್ರೆಸ್ ಬಿಜೆಪಿಗೆ ರಾಜ್ಯದ ಜನರ ಪರ ಕೆಲಸ ಮಾಡಲು ಆಗುತ್ತಿಲ್ಲ.  ಕಾಂಗ್ರೆಸ್  ಭಾಗ್ಯಗಳ ಘೋಷಣೆ ಬಿಟ್ಟು ಏನೂ ಕೊಟ್ಟಿಲ್ಲ ಎಂದು ಸಿಎಂ ಇಬ್ರಾಹಿಂ ಕಿಡಿಕಾರಿದರು.

Key words: no capable, ruling party, Opposition party, CM Ibrahim