ಶಂಕರ ಮಠಕ್ಕೆ ಭೇಟಿ ನೀಡಿ ಶಾರದಾದೇವಿ ದರ್ಶನ ಪಡೆದ ಸಿಎಂ ಹೆಚ್.ಡಿ ಕುಮಾರಸ್ವಾಮಿ…

ಬೆಂಗಳೂರು,ಜು,17,2019(www.justkannada.in):  ಇಂದು ಸುಪ್ರೀಂಕೋರ್ಟ್ ನಲ್ಲಿ ತೀರ್ಪು ಹಿನ್ನೆಲೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ಶಂಕರ ಮಠಕ್ಕೆ ಭೇಟಿ ನೀಡಿ ತಾಯಿ ಶಾರದಾದೇವಿಯ ಆಶೀರ್ವಾದ ಪಡೆದರು.

ನಗರದ ಚಾಮರಾಜಪೇಟೆಯಲ್ಲಿರುವ ಶಂಕರ್ ಮಠಕ್ಕೆ ಭೇಟಿ ನೀಡಿದ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಾಯಿ ಶಾರದಾಂಬೆ ದರ್ಶನ ಪಡೆದರು. ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಸಚಿವ ಹೆಚ್.ಡಿ ರೇವಣ್ಣ ಸಾಥ್ ನೀಡಿದರು.

ರಾಜೀನಾಮೆ ಅಂಗೀಕಾರ ವಿಳಂಬ ಪ್ರಶ್ನಿಸಿ ಸುಪ್ರೀಕೋರ್ಟ್ ಗೆ ಸ್ಪೀಕರ್ ವಿರುದ್ದ ಅತೃಪ್ತ ಶಾಸಕರು ಸಲ್ಲಿಸಿರುವ ಅರ್ಜಿ ವಿಚಾರಣೆ ಮುಕ್ತಾಯವಾಗಿದ್ದು ಇಂದು ತೀರ್ಪು ಹೊರ ಬೀಳಲಿದೆ. ಹಾಗೆಯೇ ನಾಳೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ವಿಶ್ವಾಸ ಮತಯಾಚನೆ ಮಾಡಲಿದ್ದು, ಸಮ್ಮಿಶ್ರ ಸರ್ಕಾರದ ಅಳಿವು ಉಳಿವಿನ ಬಗ್ಗೆ ನಾಳೆ ನಿರ್ಧಾರ ಆಗಲಿದೆ. ಈ ನಡುವೆ ರಾಜ್ಯ ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೆಚ್.ಡಿ ರೇವಣ್ಣ ದೇವರ ಮೊರೆ ಹೋಗಿದ್ದಾರೆ.

Key words: CM HD Kumaraswamy – visit- Shankara Math –spacial worship- Sharadhadevi