ಸಿಎಂ ಹೆಚ್.ಡಿ ಕುಮಾರಸ್ವಾಮಿ ದೆಹಲಿ ಪ್ರವಾಸ ದಿಢೀರ್ ರದ್ದು…

ಬೆಂಗಳೂರು,ಮೇ,21,2019(www.justkannada.in):  ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರ ದೆಹಲಿ ಪ್ರವಾಸ ದಿಢೀರ್ ರದ್ಧಾಗಿದೆ.

ವಿಎಂ ಮತ್ತು ವಿವಿಪ್ಯಾಟ್ ಕುರಿತು ಕಳವಳ ವ್ಯಕ್ತಪಡಿಸಿರುವ ವಿರೋಧ ಪಕ್ಷಗಳು ಇಂದು ಚುನಾವಣಾ ಆಯೋಗದ ವಿರುದ್ದ ಪ್ರತಿಭಟನೆ ನಡೆಸಲಿದ್ದು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಸಿಎಂ ಹೆಚ್.ಡಿ ಕುಮಾರಸ್ವಾಮಿ ಇಂದು ದೆಹಲಿಗೆ ತೆರಳಬೇಕಿತ್ತು. ಆದರೆ ದೆಹಲಿ ಪ್ರವಾಸ ದಿಢೀರ್ ರದ್ಧಾಗಿದ್ದು ಇಂದು ಬೆಂಗಳೂರಿನಲ್ಲಿ ಹೆಚ್.ಡಿ ಕುಮಾರಸ್ವಾಮಿ ಉಳಿಯಲಿದ್ದಾರೆ.

ಇವಿಎಂ ವಿವಿಪ್ಯಾಟ್ ಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ  ವಿರೋಧಪಕ್ಷಗಳ ಪ್ರತಿನಿಧಿಗಳು ಚುನಾವಣಾ ಆಯೋಗದ  ವಿರುದ್ದ ಪ್ರತಿಭಟನೆ ನಡೆಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Key words: CM HD Kumaraswamy Delhi tour cancelled

#politicalnews #cmhdkumaraswamy #dehli