Saturday, August 8, 2026

BDA Apartments

Home Front Page 50 ಕೋಟಿ ಆಮಿಷ ಬಗ್ಗೆ ಸಿಎಂ ಧರ್ಮಸ್ಥಳಕ್ಕೆ ಬಂದು ಆಣೆ ಮಾಡಲಿ- ಎಂ.ಪಿ ರೇಣುಕಾಚಾರ್ಯ ಸವಾಲು

50 ಕೋಟಿ ಆಮಿಷ ಬಗ್ಗೆ ಸಿಎಂ ಧರ್ಮಸ್ಥಳಕ್ಕೆ ಬಂದು ಆಣೆ ಮಾಡಲಿ- ಎಂ.ಪಿ ರೇಣುಕಾಚಾರ್ಯ ಸವಾಲು

ದಾವಣಗೆರೆ,ನವೆಂಬರ್,14,2024 (www.justkannada.in):  ಬಿಜೆಪಿ ವಿರುದ್ದ 50 ಕೋಟಿ ಆಮಿಷ ಆರೋಪ ಮಾಡಿರುವ ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಧರ್ಮಸ್ಥಳಕ್ಕೆ ಬಂದು ಆಣೆ ಮಾಡಲಿ ಎಂದು ಮಾಜಿ ಶಾಸಕ ಎಂ.ಪಿ ರೇಣುಕಾಚಾರ್ಯ ಸವಾಲು ಹಾಕಿದ್ದಾರೆ.

ನಮ್ಮ ಶಾಸಕರಿಗೆ ತಲಾ 50 ಕೋಟಿ ಆಮಿಷವೊಡ್ಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಆರೋಪ ಕುರಿತು ಮಾತನಾಡಿದ ಎಂ.ಪಿ ರೇಣುನಾಚಾರ್ಯ, ಕಾಂಗ್ರೆಸ್ ಗೆ ಚುನಾವಣೆಯಲ್ಲಿ ಸೋಲುವ ಭಯ ಸೋಲುವ ಭಯಕ್ಕೆ 5 ಕೋಟಿ ಆಮಿಷ ಮಾಡಿದ್ದಾರೆ.  ಸಿದ್ದರಾಮಯ್ಯ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ 50ಕೋಟಿ ಆಫರ್ ಬಗ್ಗೆ ಸಿಎಂ ಸಿದ್ದರಾಮಯ್ಯ ಬಹಿರಂಗಪಡಿಸಿ ಎಂದು ಗುಡುಗಿದರು.

ಯಾರು ಅಫರ್ ಕೊಟ್ರು ಅಂತಾ ಸಿಎಂ ನಿರೂಪಿಸಲಿ. ಈ ಬಗ್ಗೆ ಚರ್ಚಿಸಲಿ.    ಧರ್ಮಸ್ಥಳಕ್ಕೆ ಬಂದು ಸಿಎಂ ಆಣೆ ಮಾಡಲಿ ಎಂದು ಸವಾಲೆಸೆದರು.

Key words: CM, Dharamsthala, swear, 50 crore, MP Renukacharya