ಸಿಎಂ ಆಯ್ಕೆ ಮಾಡಿದ್ದು ಶಾಸಕರು: ಡಿಸಿಎಂ ಸ್ಥಾನ ಕೇಳೋದು ತಪ್ಪಾ..?  ಸಚಿವ ಕೆ.ಎನ್ ರಾಜಣ್ಣ

ಬೆಂಗಳೂರು,ಜೂನ್,29,2024 (www.justkannada.in):  ರಾಜ್ಯದಲ್ಲಿ ಸಿಎಂ ಬದಲಾವಣೆ ಮತ್ತು ಹೆಚ್ಚುವರಿ ಡಿಸಿಎಂ ಹುದ್ದೆ ಕುರಿತು ಚರ್ಚೆಯಾಗುತ್ತಿದ್ದು ಈ ಬಗ್ಗೆ ಚರ್ಚೆ ಮಾಡದಂತೆ ಡಿಸಿಎಂ ಡಿಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಆದರೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆಗೂ ಬಗ್ಗದ ಸಚಿವ ಕೆ.ಎನ್ ರಾಜಣ್ಣ , ಡಿಸಿಎಂ  ಸ್ಥಾನ ಕೇಳಬಾರದಾ..?  ಕೇಳೋದು ತಪ್ಪಾ?  ಚಂದ್ರಶೇಖರ ಶ್ರೀ ಹೇಳಿದ್ರೆ  ಸಿಎಂ ಮಾಡೋಕೆ ಆಗುತ್ತಾ..? ಸಿಎಂ ರಾಜೀನಾಮೆ ಕೊಡಲಿ ಅಂದ್ರೆ  ಸುಮ್ಮನಿರನೇಕಾ? ಎಂದು ಪ್ರಶ್ನಿಸಿದರು.

ಸಿಎಂ ಆಯ್ಕೆ ಮಾಡಿದ್ದು ಶಾಸಕರು,  ಹೈಕಮಾಂಡ್. ಡಿಕೆ ಶಿವಕುಮಾರ್  ವಾರ್ನಿಂಗ್ ಗೆ ನಾನು ಕೇಳಲ್ಲ ನಾನು ರಾಜಣ್ಣನೇ ಇವೆಲ್ಲಾ ಸರಿಯಿಲ್ಲ.  ಡಿಕೆಸುರೇಶ್ ಸೋಲಿಗೆ ಚಂದ್ರಶೇಖರ್ ಕಾರಣ ಎಂದು ಸಚಿವ ರಾಜಣ್ಣತಿಳಿಸಿದರು.

Key words: CM, DCM, post ,Minister,  KN Rajanna