ತುಮಕೂರು,ಡಿಸೆಂಬರ್,24,2025 (www.justkannada.in): ಸಿಎಂ ಬದಲಾವಣೆ ಗೊಂದಲ ವಿಚಾರದಲ್ಲಿ ಹೈಕಮಾಂಡ್ ಮಧ್ಯ ಪ್ರವೇಶ ಮಾಡಲ್ಲ ಎಂಬುದು ನನ್ನ ಅಭಿಪ್ರಾಯ ಎಂದು ಮಾಜಿ ಸಚಿವ ಕೆ.ಎನ್ ರಾಜಣ್ಣ ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೆ.ಎನ್ ರಾಜಣ್ಣ, ಸಿಎಂ, ಸಚಿವರ ಬದಲಾವಣೆ ಹೈಕಮಾಂಡ್ ನಿರ್ಧಾರದ ಮೇಲೆ ಆಗುತ್ತೆ. ಹೈಕಮಾಂಡ್ ಯಾವಾಗ ಏನು ಮಾಡುತ್ತೋ ಗೊತ್ತಿಲ್ಲ. ಮಲ್ಲಿಕಾರ್ಜುನ ಖರ್ಗೆ ನಮ್ಮ ಪಕ್ಷದ ಅಧ್ಯಕ್ಷರು. ಅವರೇ ಹೈಕಮಾಂಡ್. ಸಿಎಂ ಬದಲಾವಣೆ ಗೊಂದಲ ನಾವು ಸೃಷ್ಠಿ ಮಾಡಿದ್ದಲ್ಲ. ನೀವೇ ಬಗಹರಿಸಿಕೊಳ್ಳಿ ಅಂತಾ ಖರ್ಗೆ ಹೇಳಿದ್ದಾರೆ. ಹೈಕಮಾಂಡ್ ಕಡೆ ಏಕೆ ಬೊಟ್ಟು ಮಾಡ್ತೀರಿ ಅಂದಿದ್ದಾರೆ.
ಈ ವಿಚಾರದಲ್ಲಿ ಹೈಕಮಾಂಡ್ ಮಧ್ಯ ಪ್ರವೇಶ ಮಾಡುತ್ತಾ ಖರ್ಗೆ ಅವರ ಹೇಳಿಕೆ ಮೂಲಕ ಈ ಭಾವನೆ ಬಂದಿದೆ. ಒಬ್ಬರ ಕೈಯಲ್ಲಿ ಗೊಂದಲ ಸೃಷ್ಠಿಯಾಗಿರುವುದಲ್ಲ. ಹಲವರ ಕಡೆಯಿಂದ ಗೊಂದಲ ಸೃಷ್ಠಿಯಾಗಿದೆ. ಹೈಕಮಾಂಡ್ ಮಧ್ಯಪ್ರವೇಶ ಮಾಡಲ್ಲ ಎಂಬುದು ನನ್ನ ಅಭಿಪ್ರಾಯ. ಹೈಕಮಾಂಡ್ ನಿರ್ಧಾರದ ಮೇಲೆ ಎಲ್ಲವೂ ಅಂತಿಮವಾಗುತ್ತೆ ಎಂದರು.
Key words: CM, change,high command, interfere, K.N. Rajanna







