ಸಿಎಂ ಬದಲಾವಣೆ ವಿಚಾರ: ಏನಾಗುತ್ತೆ ಎಂಬುದನ್ನ ಮುಂದಿನ ದಿನಗಳಲ್ಲಿ ನೋಡೋಣ- ಸಚಿವ ಸಿ.ಪಿ ಯೋಗೇಶ್ವರ್.

ಬೆಂಗಳೂರು,ಜೂನ್,12,2021(www.justkannada.in): ರಾಜ್ಯದಲ್ಲಿ ಸಿಎಂ ಬದಲಾವಣೆ ಬಗ್ಗೆ ಭಾರಿ ಚರ್ಚೆಯಾಗುತ್ತಿದ್ದು ಬಿಜೆಪಿ ನಾಯಕರು ಸಿಎಂ ಬದಲಾವಣೆಯ ಪ್ರಶ್ನೆಯೇ ಇಲ್ಲ ಎಂದು ಹೇಳಿಕೆ ನೀಡುತ್ತಿದ್ದಾರೆ. ಈ ಮಧ್ಯೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರವಾಸೋದ್ಯಮ ಸಚಿವ ಸಿ.ಪಿ ಯೋಗೇಶ್ವರ್ , ಮುಂದೆ ಏನಾಗುತ್ತೆ ಎಂಬುದನ್ನ ಮುಂದಿನ ದಿನಗಳಲ್ಲಿ ನೋಡೋಣ ಎಂದಿದ್ದಾರೆ.jk

ಚನ್ನಪಟ್ಟಣದಲ್ಲಿ ಇಂದು ಮಾತನಾಡಿದ ಸಚಿವ ಸಿ.ಪಿ ಯೋಗೇಶ್ವರ್,  ಬಿಎಸ್ ಯಡಿಯೂರಪ್ಪ ಅವರೇ ನಾನು 2 ವರ್ಷ ಸಿಎಂ ಆಗಿರುತ್ತೇನೆ ಎಂದಿದ್ದಾರೆ. ಅದನ್ನ ಒಪ್ಪಿಕೊಳ್ಳೋಣ.  ಆದರೆ ಮುಂದೆ ಏನಾಗುತ್ತದೆ ಎಂಬುದನ್ನ ನೋಡಬೇಕು. ಎಲ್ಲದಕ್ಕೂ ನಮ್ಮ ಪಕ್ಷದ ವರಿಷ್ಠರು ತೆರೆ ಎಳೆಯುತ್ತಾರೆ ಎಂದರು.

Key words: CM –Change- Issue-Minister -C.P. Yogeshwar.