ಋಣಮುಕ್ತ ಕಾಯ್ದೆ ಬಗ್ಗೆ ಸಿಎಂ ಬಿಎಸ್ ಯಡಿಯೂರಪ್ಪ ಚರ್ಚೆ…

ಬೆಂಗಳೂರು,ಆ,1,2019(www.justkannada.in):  ಅಧಿಕಾರಾವಧಿಯ ಕೊನೆಯ ದಿನದಂದು ಹಿಂದಿನ ಸಿಎಂ ಹೆಚ್.ಡಿ ಕುಮಾರಸ್ವಾಮಿ ಜಾರಿ ಮಾಡಿದ್ದ ಋಣಮುಕ್ತ ಕಾಯ್ದೆ ಕುರಿತು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಚರ್ಚೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಹಿಂದಿನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಅಧಿಕಾರದಿಂದ ಕೆಳೆಗಿಳಿಯುವ ಕೊನೆಯ ದಿನ ಹೆಚ್.ಡಿ ಕುಮಾರಸ್ವಾಮಿ ಋಣಮುಕ್ತ ಕಾಯ್ದೆ ಜಾರಿ ಮಾಡಿ ರಾಜ್ಯದ ಜನತೆಗೆ ಗಿಫ್ಟ್ ನೀಡಿದ್ದರು. ಈ ಋಣಮುಕ್ತ ಕಾಯ್ದೆ ಬಗ್ಗೆ  ಬಿಎಸ್ ಯಡಿಯೂರಪ್ಪ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಋಣಮುಕ್ತ ಕಾಯ್ದೆಯಲ್ಲಿ ಸರ್ಕಾರದ ಪಾತ್ರ,  ಕಾಯ್ದೆ ಜಾರಿಗೆ ಯಾವ ಯಾವ ಅಧಿಕಾರಿಗಳ ನೇಮಕವಾಗಿದೆ. ನೋಡೆಲ್ ಅಧಿಕಾರಿಗಳ ಕಾರ್ಯ ವ್ಯಾಪ್ತಿ ಏನು..? ಎಂಬುದರ ಬಗ್ಗೆ ಸಿಎಂ ಅಧಿಕಾರಿಗಳ ಜತೆ ಚರ್ಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಜನತೆಗೆ ಋಣಮುಕ್ತ ಕಾಯ್ದೆಯಿಂದ ಭೂಮಿ ಇಲ್ಲದ ರೈತರಿಗೆ ಹಾಗೂ 2 ಹೆಕ್ಟೆರ್ ಭೂಮಿ ಹೊಂದಿರದ ರೈತರು, ಸಣ್ಣ ರೈತರು, ಮನೆ ಇಲ್ಲದವರಿಗೆ ಈ ಕಾಯ್ದೆಯಿಂದ ಅನುಕೂಲವಾಗಲಿದೆ. ಕೃಷಿ, ವಾರ್ಷಿಕ ಆದಾಯ ಸೇರಿದಂತೆ ಹಲವು ಋಣಮುಕ್ತ ಮಾಡಲು ಋಣ ವಿಮೋಚನಾ ಮುಕ್ತ ಕಾಯ್ದೆ.ಸ್ಥಿರಾಸ್ತಿ ಅಡಮಾನ ಮಾಡಿದರೆ, ಅದನ್ನ ಬಿಡುಗಡೆಗೆ ಅವಕಾಶ ಇರಲಿದೆ. ವಾರ್ಷಿಕ 1,20,000ರೂ. ಆದಾಯದ ಒಳಗಾಗಿದ್ದರೆ, ಅನುಕೂಲ ಸಿಗಲಿದೆ. ಖಾಸಗಿ ಲೇವಾದೇವಿದಾರರಿಂದ ಪಡೆದ ಸಾಲವೂ ಮನ್ನಾ ಆಗಲಿದೆ. ಯಾವುದೇ ಕೈಸಾಲ ಪಡೆದಿದ್ದರೂ ಅದು ಮನ್ನಾ ಆಗಲಿದೆ.

Key words: CM -BS Yeddyurappa- talks- about- Debt Relief Act