Friday, July 31, 2026

BDA Apartments

Home Front Page ಹೆಚ್.ಡಿಕೆ ಮತ್ತು ಸುಮಲತಾ ಅಂಬರೀಶ್  ಟಾಕ್ ವಾರ್ ಬಗ್ಗೆ ಸಿಎಂ ಬಿಎಸ್ ವೈ ರಿಯಾಕ್ಷನ್ ಏನು...

ಹೆಚ್.ಡಿಕೆ ಮತ್ತು ಸುಮಲತಾ ಅಂಬರೀಶ್  ಟಾಕ್ ವಾರ್ ಬಗ್ಗೆ ಸಿಎಂ ಬಿಎಸ್ ವೈ ರಿಯಾಕ್ಷನ್ ಏನು ಗೊತ್ತೆ.

ಕಲ್ಬುರ್ಗಿ, ಜುಲೈ,10,2021(www.justkannada.in):  ಕೆಆರ್ ಎಸ್ ಡ್ಯಾಂ ಬಿರುಕು ವಿಚಾರಕ್ಕೆ ಸಂಬಂಧಿಸಿಂತೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಮತ್ತು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ನಡುವಿನ ಟಾಕ್ ವಾರ್ ಬಗ್ಗೆ ಸಿಎಂ ಬಿಎಸ್ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ.jk

ಕಲ್ಬುರ್ಗಿಯಲ್ಲಿ ಇಂದು ಮಾಧ್ಯಮಗಳ ಜತೆ  ಮಾತನಾಡಿರುವ ಸಿಎಂ ಬಿಎಸ್ ಯಡಿಯೂರಪ್ಪ, ಎಲ್ಲರೂ ಸಹೋದರರಂತೆ ಬಾಳುವುದನ್ನ ಕಲಿಯಬೇಕು. ಅಲ್ಲಿನ ಅಭಿವೃದ್ಧಿ ಬಗ್ಗೆ ಎಲ್ಲರೂ ಒಟ್ಟಾಗಿ ಹೋಗಬೇಕು.  ಅಂಬರೀಶ್ ಸ್ಮಾರಕ ನಿರ್ಮಾಣಕ್ಕೆ ಒಪ್ಪಿಗೆ ನೀಡಿದ್ದು ನನಗೆ ಸಮಾಧಾನವಿದೆ ಎಂದು ತಿಳಿಸಿದ್ದಾರೆ.

ಇನ್ನು ರಾಜ್ಯದಲ್ಲಿ ಎಲ್ಲೆಡೆ ಉತ್ತಮ ಮಳೆಯಾಗುತ್ತಿದ್ದು, ಪ್ರವಾಹ ತಡೆಯಲು ಸರ್ಕಾರ ಸರ್ವ ಸನ್ನದ್ದವಾಗಿದೆ ಕರಾವಳಿ ತೀರಪ್ರದೇಶ, ಮಲೆನಾಡು, ಕಲ್ಯಾಣ ಕರ್ನಾಟಕ ಸೇರಿದಂತೆ ಮತ್ತಿತರ ಕಡೆ ಉತ್ತಮ ಮಳೆಯಾಗುತ್ತಿದೆ. ಪ್ರವಾಹ ತಡೆಗಟ್ಟಲು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಲಾಗಿದೆ ಎಂದು ಸಿಎಂ ಬಿಎಸ್ ವೈ ತಿಳಿಸಿದರು.

Key words: CM BS Yeddyurappa- Reaction – HD kumaraswamy- Sumalatha Ambarish -Talk War