ಸಿಎಂ ಬದಲಾವಣೆ ಬಗ್ಗೆ ಹೇಳಿಕೆ ವಿಚಾರ: ಯತ್ನಾಳ್  ವಿರುದ್ಧ ಶಾಸಕ ಎಂ.ಪಿ ರೇಣುಕಾಚಾರ್ಯ ಕಿಡಿ  …

ಬೆಂಗಳೂರು,ಅಕ್ಟೋಬರ್,21,2020(www.justkannada.in):  ಬಿಎಸ್ ಯಡಿಯೂರಪ್ಪ ಸಿಎಂ ಆಗಿ ಬಹಳ ದಿನ ಉಳಿಯಲ್ಲ ಎಂದು ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ಎಂ.ಪಿ ರೇಣುಕಾಚಾರ್ಯ ಕಿಡಿಕಾರಿದ್ದಾರೆ.jk-logo-justkannada-logo

ಬಸನಗೌಡ ಪಾಟೀಲ್ ಯತ್ನಾಳ್ ಒಬ್ಬ ದುರಂತ ನಾಯಕ. ಯತ್ನಾಳ್ ಹುಚ್ಚು ಹುಚ್ಚಾಗಿ ಮಾತನಾಡಿದರೇ ಜನರು ಒಪ್ಪುವುದಿಲ್ಲ. ಯತ್ನಾಳ್ ವಿರುದ್ಧ ಪಕ್ಷ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಶಾಸಕ ಎಂ.ಪಿ ರೇಣುಕಾಚಾರ್ಯ ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು ಈ ಬಗ್ಗೆ ಮಾತನಾಡಿದ ಶಾಸಕ ಎಂ.ಪಿ ರೇಣುಕಾಚಾರ್ಯ,  ಯತ್ನಾಳ್ ನಡೆ ಸರಿಯಿಲ್ಲ. ಪಕ್ಷ ಇದನ್ನ ಸಿರಿಯಸ್ ಆಗಿ ತೆಗೆದುಕೊಳ್ಳಬೇಕು. ಯತ್ನಾಳ್ ಸಿಎಂ ಆಗೋಕೆ ಸಾಧ್ಯವಿಲ್ಲ. ಅವರು ಸಿಎಂ ಬಳಿ ಬಹಿರಂಗ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.cm bs yeddyurappa- MLA-Basanagowda patil yatnal- statement-MP renukacharaya

ಬಿಎಸ್ ಯಡಿಯೂರಪ್ಪ ಅವರನ್ನ ಶಾಸಕಾಂಗ ಪಕ್ಷ ಸಿಎಂ ಮಾಡಿದೆ.  ಆದರೆ ತನ್ನನ್ನ ಮಂತ್ರಿ ಮಾಡಲಿಲ್ಲ ಎಂಬ ಕಾರಣಕ್ಕೆ ಯತ್ನಾಳ್ ಈ ರೀತಿ ಹೇಳುತ್ತಿದ್ದಾರೆ.  ಯತ್ನಾಳ್ ವಿರುದ್ಧ ಪಕ್ಷ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ರೇಣುಕಾಚಾರ್ಯ ಒತ್ತಾಯಿಸಿದರು.

Key words: cm bs yeddyurappa- MLA-Basanagowda patil yatnal- statement-MP renukacharaya