ಮಾಜಿ ಪ್ರಧಾನಿ ಹೆಚ್.ಡಿಡಿ ಒತ್ತಡಕ್ಕೆ ಮಣಿದ ಸಿಎಂ ಬಿಎಸ್ ವೈ: ಯಾದಗಿರಿ ಪಿಎಸ್ ಐ ಎತ್ತಂಗಡಿ…

ಬೆಂಗಳೂರು,ನ,6,2019(www.justkannada.in):  ಜೆಡಿಎಸ್ ಕಾರ್ಯಕರ್ತರ ಮೇಲೆ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದಂತೆ ಸಿಎಂ ನಿವಾಸದ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಒತ್ತಡಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ ಮಣಿದಿದ್ದಾರೆ.

ಯಾದಗಿರಿ ಪಿಎಸ್ ಐ ಬಾಪುಗೌಡರನ್ನ ವರ್ಗಾವಣೆ ಮಾಡಲು ಸಿಎಂ ಬಿಎಸ್ ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ. ಹಾಗೆಯೇ ಪಿಎಸ್ ಐ ಬಾಬುಗೌಡಗೆ  ರಜೆ ಮೇಲೆ ತೆರಳುವಂತೆ ಸಿಎಂ ಬಿಎಸ್ ಯಡಿಯೂರಪ್ಪ ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಜೆಡಿಎಸ್ ಕಾರ್ಯಕರ್ತನ ಮೇಲೆ ಯಾದಗಿರಿ ಪಿಎಸ್ ಐ ಬಾಪುಗೌಡ ಹಲ್ಲೆ ನಡೆಸಿದ್ದಾರೆಂಬ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಯಾದಗಿರಿಯಲ್ಲಿ ಜೆಡಿಎಸ್ ನಿಂದ ನಡೆದ ಪ್ರತಿಭಟನೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಭಾಗವಹಿಸಿ ಪಿಎಸ್ ಐ ವಿರುದ್ದ ಕ್ರಮಕ್ಕೆ ಆಗ್ರಹಿಸಿದ್ದರು. ನಂತರ ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಪಿಎಸ್ ಐ ವಿರುದ್ದ ಕ್ರಮ ಕೈಗೊಳ್ಳದಿದ್ದರೇ ಸಿಎಂ ಯಡಿಯೂರಪ್ಪ ನಿವಾಸದ ಎದುರು ನ.15ರಂದು ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ಇದೀಗ ಹೆಚ್ ಡಿಡಿ ಎಚ್ಚರಿಕೆಗೆ ಬೆಚ್ಚಿದ ಸಿಎಂ ಬಿಎಸ್ ವೈ ಯಾದಗಿರಿ ಪಿಎಸ್ ಐ ವರ್ಗಾವಣೆಗೆ ಆದೇಶ  ಹೊರಡಿಸಿದ್ದಾರೆ.

Key words: CM BS Yeddyurappa- Former Prime Minister- HD devegowda- Order – Yadagiri PSI-Suspend