Saturday, October 10, 2026

Dasara Wishes

ಗೂಗಲ್ ಕಂಪನಿ ಜತೆ VTU ಶೈಕ್ಷಣಿಕ ಒಪ್ಪಂದ: ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಸಹಿ ...
Happy Dasara
Home Front Page ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಹಾಲಿ ಸಿಎಂ ಮತ್ತು ಮಾಜಿ ಸಿಎಂ…

ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಹಾಲಿ ಸಿಎಂ ಮತ್ತು ಮಾಜಿ ಸಿಎಂ…

ಬೆಂಗಳೂರು,ಸೆ.19,2019(www.justkannada.in): ಪರಸ್ಪರ ರಾಜಕೀಯ ಕೆಸರೆರಚಾಟದಲ್ಲಿ ತೊಡಗುತ್ತಿದ್ದ  ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ದೃಶ್ಯ ಕಂಡು ಬಂತು.

ಹೌದು, ಬೆಂಗಳೂರಿನ  ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ಎಸ್.ಸಿ ಮತ್ತು ಎಸ್ ಟಿ ಸಮುದಾಯದ ಆರ್ಥಿಕ ಅಭಿವೃದ್ಧಿ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಸಿದ್ಧರಾಮಯ್ಯ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು.

ಕಾರ್ಯಕ್ರಮಕ್ಕೆ ಮೊದಲು ಬಿ.ಎಸ್.ಯಡಿಯೂರಪ್ಪ ಆಗಮಿಸಿದ್ದರು. ನಂತರ ಕಾರ್ಯಕ್ರಮಕ್ಕೆ ಸಿದ್ಧರಾಮಯ್ಯ ಆಗಮಿಸಿದ್ದು ಈ ವೇಳೆ ಸಿಎಂ ಬಿ.ಎಸ್ ಯಡಿಯೂರಪ್ಪ ಎದ್ದು ನಿಂತು ಹಸ್ತಲಾಘವ ಮಾಡಿ ಬರಮಾಡಿಕೊಂಡರು. ನಂತರ ವೇದಿಯಲ್ಲಿ ಇಬ್ಬರು ನಾಯಕರು ಅಕ್ಕಪಕ್ಕದಲ್ಲಿ ಕುಳಿತುಕೊಂಡರು.  ಸಿಎಂ ಬಿಎಸ್ ಯಡಿಯೂರಪ್ಪ ಕಾರ್ಯಕ್ರಮ ಉದ್ಘಾಟಿಸಿದರೆ, ಮಾಜಿ ಸಿಎಂ ಸಿದ್ದರಾಮಯ್ಯ ಸವಲತ್ತುಗಳ ಕುರಿತ ಮಾಹಿತಿ ಇರುವ ಪುಸ್ತಕ ಬಿಡುಗಡೆಯನ್ನು ನೆರವೇರಿಸಿದರು.

Key words: CM –bs yeddyurappa-former CM –siddaramaiah-bangalore