ಮೊದಲ ಬಾರಿಗೆ ರಾಜೀನಾಮೆ ಸುಳಿವು ನೀಡಿದ ಸಿಎಂ ಬಿಎಸ್ ಯಡಿಯೂರಪ್ಪ…?

ಬೆಂಗಳೂರು,ಜುಲೈ,22.2021(www.justkannada.in):  ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿದ್ದು, ನಾಯಕತ್ವ ಬದಲಾವಣೆ ವಿಚಾರ ಚರ್ಚಿಯಲ್ಲಿದ್ದು,  ಈ ನಡುವೆ ಮೊದಲ ಬಾರಿಗೆ ಸಿಎಂ ಬಿ.ಎಸ್. ಯಡಿಯೂರಪ್ಪ ರಾಜೀನಾಮೆಯ ಸುಳಿವು ಕೊಟ್ಟಿದ್ದಾರೆ.jk

ಬೆಂಗಳೂರಿನ ಕಾಚರಕನಹಳ್ಳಿಯ ಕೋದಂಡರಾಮಸ್ವಾಮಿ ದೇವಾಸ್ಥಾನದಲ್ಲಿ ನಡೆದ ದನ್ವಂತರಿಯಾಗದಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ, ಬಿಜೆಪಿಯ ಪಕ್ಷ ಬಲಪಡಿಸೋದೆ ನನ್ನ ಸಂಕಲ್ಪ. ಬಿಜೆಪಿ ಅಧಿಕಾರಕ್ಕೆ ತರುವುದೇ ನನ್ನ ಗುರಿ.   ಹೈಕಮಾಂಡ್ ನನ್ನ ಕೆಲಸವನ್ನ ಮೆಚ್ಚಿಕೊಂಡಿದೆ.  ಪ್ರಧಾನಿ ಮೋದಿ ಅಮಿತ್ ಶಾ ನನಗೆ ಪ್ರೀತಿ ವಿಶ್ವಾಸ ತೋರಿಸಿದ್ದಾರೆ. ಬಿಜೆಪಿಯಲ್ಲಿ 75 ವರ್ಷ ದಾಟಿದವರಿಗೆ ಅದಿಕಾರ ಕೊಡಲ್ಲ. ಆದರೆ ನನ್ನ ಕೆಲಸ ಮೆಚ್ಚಿ ಅಧಿಕಾರ ನೀಡಿದ್ದಾರೆ ಎಂದರು.

ಹೈಕಮಾಂಡ್ ನಿಂದ ಜುಲೈ 25 ರಂದು ಸೂಚನೆ ಬರಲಿದೆ. ರಾಷ್ಟ್ರೀಯ ನಾಯಕರ ಸೂಚನೆಯಂತೆ ನಾನು ಜುಲೈ 25 ರಂದು ನನ್ನ ಕೆಲಸ ಮಾಡುತ್ತೇನೆ. ರಾಷ್ಟ್ರೀಯ ಅಧ್ಯಕ್ಷರ ಸೂಚನೆಯಂತೆ ನಡೆಯುತ್ತೇನೆ. ಕೇಂದ್ರ ಏನು ಹೇಳುತ್ತದಯೋ ಆ ತಿರ್ಮಾನ ನನ್ನದು. ಹೈಕಮಾಂಡ್ ತೀರ್ಮಾನವೇ ನನ್ನ ತೀರ್ಮಾನ ಎಂದರು

ನನ್ನ ಪರವಾಗಿ ಪ್ರತಿಭಟನೆ, ಚಳುವಳಿ ಮಾಡದಂತೆ ಅಭಿಮಾನಿಗಳಲ್ಲಿ ಮನವಿ ಮಾಡುತ್ತೇನೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

ENGLISH SUMMARY…

CM BSY hints about his resignation for the first time
Bengaluru, July 22, 2021 (www.justkannada.in): The state is witnessing significant developments in politics. Change in BJP leadership is making rounds. Chief Minister B.S. Yediyurappa has for the first time, hinted about his resignation.
He participated in the Dhanwantari homa, held at the Kodandaramaswamy temple in Kachakarnahalli in Bengaluru today. Speaking to the media persons he informed that strengthening of the party in the state will always be his first priority and bringing the party to power again in the state his aim. “The High Command has liked my work. Prime Minister Narendra Modi and Home Minister Amit Shah have treated me with respect and have exhibited confidence in me. Candidates above 75 years of age are not given power in our party. However, I was given power looking at my work,” he explained.
“We will receive instructions from the high command on July 25. I will work as per the instructions of the national leaders, till July 25. I will do whatever they say,” he added and requested all the party workers and his followers not to indulge in protests.
Keywords: Chief Minister/ B.S. Yedyurappa/ hints/ resignation/ July 25/ July 26/ high command

Key words: CM BS Yeddyurappa-first -hinted –CM -resignation.