ವಿಪಕ್ಷ ನಾಯಕ ಸಿದ್ಧರಾಮಯ್ಯಗೆ ಸವಾಲು ಹಾಕಿದ ಸಿಎಂ ಬಿಎಸ್ ವೈ…

ಬೆಂಗಳೂರು,ಫೆಬ್ರವರಿ,5,2021(www.justkannada.in): ಇತ್ತೀಚೆಗೆ ಕಾಂಗ್ರೆಸ್ ಚುನಾವಣೆಗಳಲ್ಲಿ ಸೋಲನುಭವಿಸಿದೆ. ಲೋಕಸಭಾ ಚುನಾವಣೆಯಿಂದ ಕಾಂಗ್ರೆಸ್ ಸೋಲನುಭವಿಸಿದೆ. ಉಪಚುನಾವಣೆಯಲ್ಲೂ ಬಿಜೆಪಿ ಗೆಲುವು ಸಾಧಿಸಿದೆ. ಮುಂದಿನ ಮೂರು ಉಪಚುನಾವಣೆಯಲ್ಲೂ ನಾವೇ ಗೆಲ್ಲುತ್ತೇವೆ ಎಂದು  ವಿಪಕ್ಷ ನಾಯಕ ಸಿದ್ಧರಾಮಯ್ಯಗೆ ಸಿಎಂ ಬಿಎಸ್ ಯಡಿಯೂರಪ್ಪ ಸವಾಲು ಹಾಕಿದರು.jk

ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯ ಪ್ರಸ್ತಾಪ ಚರ್ಚೆ ವೇಳೆ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ, ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿಲ್ಲ. ಹೀಗಾಗಿ ಮುಂದಿನ ಮೂರು ಉಪಚುನಾವಣೆಗಳಲ್ಲಿ ಬಿಜೆಪಿ ಗೆಲ್ಲಲಿದೆ. ನಾನು ಸದನದಲ್ಲಿ ಸವಾಲು ಹಾಕುತ್ತೇನೆ ಎಂದರು.

ಇದಕ್ಕೆ  ಆಕ್ಷೇಪ ವ್ಯಕ್ತಪಡಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ ನಾವು ಅಧಿಕಾರದಲ್ಲಿದ್ದಾಗ ನೀವು ಚುನಾವಣೆಗಳಲ್ಲಿ ಸೋತಿರಲಿಲ್ಲವೆ..? ಅಧಿಕಾರದಲ್ಲಿರುವಾಗ ಏನೇನು ಆಗುತ್ತೆ ಎಂಬುದು ಗೊತ್ತು ಎಂದರು. ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ ಯಡಿಯೂರಪ್ಪ ಇತ್ತೀಚಿನ ಚುನಾವಣೆಗಳಲ್ಲಿ ಕಾಂಗ್ರೆಸ್ ದಯನೀಯ ಸೋಲನುಭವಿಸಿದೆ. ಈ ಚುನಾವಣೆಯಿಂದ ನಾಯಕತ್ವವನ್ನೇ ಕಳೆದುಕೊಂಡಿದೆ ಎಂದರು.CM BS Yeddyurappa- challenged- opposition leader -Siddaramaiah.

ಇದಕ್ಕೆ ಉತ್ತರಿಸಿದ ಸಿದ್ದರಾಮಯ್ಯ ಹಾಗಿದ್ದರೆ ವಿಧಾನಸಭೆ ವಿಸರ್ಜನೆ ಮಾಡಿ ನೋಡೋಣಾ. ಎಲ್ಲರೂ ಮತ್ತೆ ಚುನಾವಣೆ ಎದುರಿಸೋಣ. ಆ ವೇಳೆ ಯಾರು ಅಧಿಕಾರಕ್ಕೆ ಬರಲಿದ್ದಾರೆ ನೋಡೋಣ ಎಂದರು.

Key words: CM BS Yeddyurappa- challenged- opposition leader -Siddaramaiah.