ಡಿಸಿಎಂ ಲಕ್ಷ್ಮಣ್ ಸವದಿಗೆ ನೀಡಿದ್ದ ಹೆಚ್ಚುವರಿ ಖಾತೆ ವಾಪಸ್ ಪಡೆದು ಗೃಹ ಸಚಿವ ಬಸವರಾಜ ಬೊಮ್ಮಾಯಿಗೆ  ನೀಡಿದ ಸಿಎಂ ಬಿಎಸ್ ವೈ…

ಬೆಂಗಳೂರು,ಫೆ,10,2020(www.justkannada.in): ಇಂದು ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿರುವ ಸಿಎಂ ಬಿಎಸ್ ಯಡಿಯೂರಪ್ಪ ಡಿಸಿಎಂ ಲಕ್ಷ್ಮಣ್ ಸವದಿಗೆ ನೀಡಿದ್ದ ಹೆಚ್ಚುವರಿ ಖಾತೆಯನ್ನ ವಾಪಸ್ ಪಡೆದು ಅದನ್ನ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಡಿಸಿಎಂ ಲಕ್ಷ್ಮಣ್ ಸವದಿಗೆ ಸಾರಿಗೆ ಖಾತೆ ಜತೆಗೆ ಕೃಷಿ ಖಾತೆಯನ್ನ ಹೆಚ್ಚುವರಿಯಾಗಿ ನೀಡಲಾಗಿತ್ತು. ಹಾಗೆಯೇ ಬಸವರಾಜ ಬೊಮ್ಮಾಯಿಗೆ ಗೃಹ ಖಾತೆ ಜತೆಗೆ ಸಹಕಾರ ಖಾತೆ ಹೆಚ್ಚುವರಿಯಾಗಿ ನೀಡಲಾಗಿತ್ತು. ಇಂದು ನೂತನ 10 ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದ್ದು ಸಹಕಾರ ಖಾತೆಯನ್ನ ಎಸ್.ಟಿ ಸೋಮಶೇಖರ್ ಅವರಿಗೆ ನೀಡಲಾಗಿದೆ.

ಹೀಗಾಗಿ ಡಿಸಿಎಂ ಲಕ್ಷ್ಮಣ್ ಸವದಿ ಬಳಿ ಹೆಚ್ಚವರಿಯಾಗಿ ಇದ್ದ ಕೃಷಿ ಖಾತೆಯನ್ನ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಸಿಎಂ ಬಿಎಸ್ ಯಡಿಯೂರಪ್ಪ ನೀಡಿದ್ದಾರೆ ಎನ್ನಲಾಗಿದೆ.

Key words: CM BS yeddyurappa-  additional –ministrial-DCM Laxman Sawadi -Home Minister- Basavaraja Bommai.