ಖಾದಿ ಎಂಪೋರಿಯಂನಲ್ಲಿ ಪತ್ನಿಗಾಗಿ ಸೀರೆ ಖರೀದಿಸಿದ ಸಿಎಂ ಬೊಮ್ಮಾಯಿ

ಬೆಂಗಳೂರು, ಅಕ್ಟೋಬರ್ 02, 2021 (www.justkannada.in): ಇಂದು ಮಹಾತ್ಮಾ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನದ ಅಂಗವಾಗಿ ಸಿಎಂ ಬಸವರಾಜ್ ಬೊಮ್ಮಾಯಿ ಖಾದಿ ಎಂಪೋರಿಯಂ ಗೆ ಭೇಟಿ ನೀಡಿದ್ದರು.

ಈ ವೇಳೆ ಪತ್ನಿಗಾಗಿ ಸೀರೆ ಖರೀದಿ ಮಾಡಿದ್ದಾರೆ. ಮೂರು ಸೀರೆಯಲ್ಲಿ ಒಂದನ್ನು ಆಯ್ಕೆ ಮಾಡಿದ ಸಿಎಂ ಪತ್ನಿಗೆ ಸೀರೆ ಖರೀದಿಸಿದರು.

ಈ ವೇಳೆ ತಮ್ಮೊಂದಿಗೆ ಇದ್ದ ಸಚಿವರಾದ ಗೋವಿಂದ ಕಾರಜೋಳ, ಎಂಟಿಬಿ ನಾಗರಾಜ್ ಹಾಗೂ ವಿಜಯೇಂದ್ರ ಅವರಿಗೂ ಮನೆಯವರಿಗೆ ಸೀರೆ ಖರೀದಿಸುವಂತೆ ಸೂಚಿಸಿದರು.

ಕಾರಜೋಳ, ಎಂಟಿಬಿ ಹಾಗೂ ವಿಜಯೇಂದ್ರ ಕೂಡ ಸೀರೆ ಖರೀದಿಸಿದ್ದು, ಬಿ.ವೈ. ವಿಜಯೇಂದ್ರ 4 ಸಾವಿರ ರೂ. ಮೌಲ್ಯದ ಸೀರೆ ಖರೀದಿಸಿದರು. ಸಿಎಂ ಬೊಮ್ಮಾಯಿ ಒಟ್ಟು 16,031 ರೂಪಾಯಿ ಮೌಲ್ಯದ ಸೀರೆ ಖರಿದಿಸಿದ್ದು, ಸ್ವತಃ ತಾವೇ ಬಿಲ್ ಕೂಡ ಪಾವತಿ ಮಾಡಿದರು.

key words: CM Bommai who bought saree for his wife at Khadi Emporium