ನಾಳೆ  ತಮ್ಮ ಚೊಚ್ಚಲ ಬಜೆಟ್ ಮಂಡನೆಗೆ ಸಿಎಂ ಬೊಮ್ಮಾಯಿ ಸಿದ‍್ಧತೆ..

ಬೆಂಗಳೂರು,ಮಾರ್ಚ್,3,2022(www.justkannada.in): ನಾಳೆ ರಾಜ್ಯ ಬಜೆಟ್ ಮಂಡನೆಯಾಗಲಿದ್ದು ತಮ್ಮ ಚೊಚ್ಚಲ ಬಜೆಟ್ ಮಂಡನೆಗೆ ಸಿಎಂ ಬಸವರಾಜ ಬೊಮ್ಮಾಯಿ ಸಕಲ ಸಿದ‍್ಧತೆ ನಡೆಸಿದ್ದಾರೆ.

ತಮ್ಮ ಮೊದಲ ಬಜೆಟ್ ನಲ್ಲಿ  ಸಿಎಂ ಬಸವರಾಜ ಬೊಮ್ಮಾಯಿ ಹಲವು ಜನಪ್ರಿಯ ಯೋಜನೆಗಳನ್ನು ಘೋಷಣೆ ಮಾಡುವ ಸಾಧ್ಯತೆ ಇದೆ. ಈ ಬಜೆಟ್‌ ನಲ್ಲಿ ಹಾಲಿನ ಪ್ರೋತ್ಸಾಹಧನ ಹೆಚ್ಚಳ, ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ, ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಸೇರಿದಂತೆ ಮಹತ್ವದ ಯೋಜನೆಗಳನ್ನು ಘೋಷಿಸುವ ನಿರೀಕ್ಷೆ ಇದೆ.

ಸಂಪನ್ಮೂಲಗಳ ಕ್ರೂಢೀಕರಣ, ಹೊಸ ಯೋಜನೆಗಳ ಘೋಷಣೆ ಹಾಗೂ ಅಭಿವೃದ್ಧಿಪರ ಕಾರ್ಯಕ್ರಮಗಳ ಅನುಷ್ಠಾನದ ದೊಡ್ಡ ಸವಾಲು ಬೊಮ್ಮಾಯಿ ಅವರ ಮುಂದಿದೆ.  ನಾಳೆ ಬಜೆಟ್ ಮಂಡನೆ ಹಿನ್ನೆಲೆ ಇಂದು ಅಧಿಕಾರಿಗಳ ಜತೆ ಸಿಎಂ ಬೊಮ್ಮಾಯಿ ಅಂತಿಮ ಹಂತದ ಸಭೆ ನಡೆಸಿದ್ದಾರೆ.

ಬಜೆಟ್  ಮಂಡನೆಗೆ ಅಜ್ಞಾತ ಸ್ಥಳದಲ್ಲಿ ಸಿಎಂ ಬೊಮ್ಮಾಯಿ ಸಿದ್ಧತೆ ನಡೆಸುತ್ತಿದ್ದು,  ಹಣಕಾಸು ಅಧಿಕಾರಿಗಳ ಜತೆ ಕೊನೆಯ ಸುತ್ತಿನ ಸಭೆ ನಡೆಸಿದರು.   ನಾಳೆ ಬಜೆಟ್ ಮಂಡನೆಗೂ ಮುನ್ನ ಸಚಿವ ಸಂಪುಟ ಸಭೆ ನಡೆಯಲಿದೆ.

Key words: CM Bommai-preparing – budget -tomorrow