ನಂಜನಗೂಡು ಶಾಸಕ ಹರ್ಷವರ್ಧನ್ ರನ್ನು ಹಾಡಿಹೊಗಳಿದ ಸಿಎಂ ಬೊಮ್ಮಾಯಿ.

ನಂಜನಗೂಡು,ನವೆಂಬರ್,28,2022(www.justkannada.in): ಈ ಹಿಂದೆ ಇದ್ದ ಶಾಸಕರು ಕೇವಲ ಜನಪ್ರಿಯರು. ಆದರೆ ಹರ್ಷವರ್ಧನ್ ಕ್ರಿಯಾಶೀಲ ಕೆಲಸಗಾರರು. ಹರ್ಷವರ್ಧನ್ ನಂತಹ ಶಾಸಕರು ನಮ್ಮ ರಾಜ್ಯಕ್ಕೆ ಮತ್ತೊಮ್ಮೆ ಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹಾಡಿ ಹೊಗಳಿದರು.

ನಂಜನಗೂಡಿನ ಕಾರ್ಯಕ್ರಮ ಕುರಿತು  ವೇದಿಕೆಯಲ್ಲಿ ಭಾಷಣ ಆರಂಭಿಸಿದ ಸಿ ಎಂ ಬಸವರಾಜ ಬೊಮ್ಮಾಯಿ, ನಮ್ಮ ಸರ್ಕಾರ  ನಂಜನಗೂಡು ಭಾಗದ ಅಭಿವೃದ್ಧಿ ಕೂಡ ಮುಖ್ಯವಾಗಿಸಿಕೊಂಡಿದೆ. ನೀರಾವರಿ ಯೋಜನೆಗೆ ,ಕೆರೆ ಕಟ್ಟೆ ತುಂಬಿಸುವ ಯೋಜನೆಗೆ 30 ಕೋಟಿ ರೂ ಬಿಡುಗಡೆ ಮಾಡುತ್ತೇವೆ. ಸರ್ಕಾರದಿಂದ ಪಡೆದುಕೊಂಡ ಹಣವನ್ನ ಅಭಿವೃದ್ಧಿಗೆ ಬಳಸಿ ನಂಜನಗೂಡನ್ನು ಮಾದರಿ ಕ್ಷೇತ್ರವಾಗಿ ಮಾಡಬೇಕೆಂಬುದನ್ನು  ಶಾಸಕರ ಆಸೆ ಎಂದರು.

ದುಡ್ಡೇ ಇದ್ದರೇ ದೊಡ್ಡಪ್ಪ ಅನ್ನುತ್ತಿದ್ದರು. ಈಗ ದುಡಿದು ತಿನ್ನುವುದೇ ದೊಡ್ಡಪ್ಪ.  ಇದುವರೆಗೂ ಕೇವಲ ಮಾತಿನಲ್ಲೇ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಅದಕ್ಕೆ ವಿರಾಮ ಹಾಕುವ ಕೆಲಸ ಮಾಡಬೇಕಿದೆ. ವಿರೋಧ ಪಕ್ಷದ ನಾಯಕರು ಸಹಜವಾಗಿ ಟೀಕೆ ಮಾಡುತ್ತಾರೆ. ರಾಜಕೀಯವಾಗಿ ಓಡಾಡುವುದಕ್ಕಿಂತ ಜನರ ಜೊತೆ ಮಾತನಾಡಬೇಕು. ನಂಜನಗೂಡು ಪ್ರವಾಸೋದ್ಯಮ ಧಾರ್ಮಿಕವಾಗಿ ಅಭಿವೃದ್ದಿಯಾಗಬೇಕು.  ನಮ್ಮ ಮನಸ್ಸು ಶುದ್ಧ ಮಾಡಕೊಂಡು ಕೆಲಸ ಮಾಡಬೇಕಿದೆ.  ನಂಜನಗೂಡಿನಲ್ಲಿ ಹರ್ಷವರ್ಧನ್ ಮತ್ತೆ ಗೆದ್ದು ಬರ್ತಾರೆ ಎಂದು ಸಿಎಂ ಬೊಮ್ಮಾಯಿ  ವಿಶ್ವಾಸ ವ್ಯಕ್ತಪಡಿಸಿದರು.

Key words: CM –Bommai- praised- Nanjangudu –MLA- Harshvardhan