ಈ ಬಾರಿ ಬಜೆಟ್ ನಲ್ಲಿ ಸ್ಕಾಲರ್ ಶಿಪ್ ಪಡೆಯುವ ಆದಾಯ ಮಿತಿ ಹೆಚ್ಚಳ- ವಿದ್ಯಾರ್ಥಿಗಳ ಜೊತೆ ಸಂವಾದದಲ್ಲಿ ಸಿಎಂ ಬೊಮ್ಮಾಯಿ ಭರವಸೆ.

ಬೆಂಗಳೂರು,ಜನವರಿ,18,2023(www.justkannada.in) ಈ ಬಾರಿ ಬಜೆಟ್ ನಲ್ಲಿ ಸ್ಕಾಲರ್ ಶೀಪ್ ಪಡೆಯುವ ಆದಾಯ ಮೀತಿ ಹೆಚ್ಚಳ ಮಾಡುತ್ತೇನೆ. 50 ಸಾವಿರದಿಂದ 3 ಲಕ್ಷ ರೂಗೆ ಆದಾಯದ ಮೀತಿ ಹೆಚ್ಚಳ ಮಾಡುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ಚರ್ಚೆ ವಿತ್ ಕಾಮನ್ ಮ್ಯಾನ್ ಸಿಎಂ ಸಂವಾದದಲ್ಲಿ  ವಿದ್ಯಾರ್ಥಿಗಳೊಂದಿಗೆ ಸಿಎಂ ಬಸವರಾಹ ಬೊಮ್ಮಾಯಿ ಸಂವಾದ ನಡೆಸಿದರು.  ವರ್ಚೂವಲ್ ಮೂಲಕ ವಿದ್ಯಾರ್ಥಿಗಳು ಸಂವಾದದಲ್ಲಿ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಸಿಎಂ ಬೊಮ್ಮಾಯಿ,  ಸ್ಟೂಡೆಂಟ್ ಲೈಫ್ ಇಸ್ ಬೆಸ್ಟ್ ಲೈಫ್ . ವಿದ್ಯಾರ್ಥಿ ಜೀವನವನ್ನ ಎಂದಿಗೂ ಮರೆಯಲ್ಲ.  ಸಿಎಂ ಆಗಿ ಕೆಲಸ ಮಾಡುವ ಅವಕಾಶ ಕೊಟ್ಟಿದೆ ಇದು ನನಗೆ ಖುಷಿ ನೀಡಿದೆ. ರಾಜಕೀಯ ದೊಡ್ಡ ಚಾಲೆಂಜ್.  ಕಿತ್ತಾಟಗಳು ಇರಬಹದು ಅದರ ಅದರಿಂದ ಕಲಿಯೋದು ಹೆಚ್ಚು. ಕಮಿಟ್ ಮೆಂಟ್ ನಿಂದ ಕೆಲಸ ಮಾಡೋದು ಮುಖ್ಯ ಎಂದು ನುಡಿದರು.

ಇದೇ ವೇಳೆ  ಪ್ರಧಾನಿ ಮೋದಿ ಜತೆ ಮೊದಲ ಭೇಟಿ ನೆನಪಿಸಿಕೊಂಡ ಸಿಎಂ ಬಸವರಾಜ ಬೊಮ್ಮಾಯಿ,   ಪ್ರಧಾನಿ ಮೋದಿ ತುಂಬಾ ಇಂಟರೆಸ್ಟಿಂಗ್ ವ್ಯಕ್ತಿ.  ಮೋದಿ ಅವರ ಜೀವನ ಎಲ್ಲರಿಗೂ ಮಾದರಿ. ಮೋದಿ ಸಕಾರಾತ್ಮಕ ವ್ಯಕ್ತಿ. ಎಲ್ಲವನ್ನೂ ಪಾಸಿಟಿವ್ ಆಗಿ ನೋಡುತ್ತಾರೆ. ಮೋದಿಯವರ ಜತೆ ಸಮಯ ಕಳೆದ್ರೆ ಅವರ ಫಾಲೋವರ್ ಆಗುತ್ತಾರೆ. ಮೋದಿ  ಅರಿಗೆ ಹೊಸತನವನ್ನ ಕಲಿಯುವ ಬಯಕೆ ಇದೆ ಎಂದರು.

ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಒಂದೇ ಆ್ಯಪ್  ತರಲಾಗುತ್ತದೆ ಫೆಬ್ರವರಿಯಲ್ಲಿ ಲೋಕಾರ್ಪಣೆ ಮಾಡುತ್ತೇವೆ. ಮುಂದಿನ 25ವರ್ಷ ಭಾರತಕ್ಕೆ ಸುವರ್ಣ ವರ್ಷ ಬರಲಿದೆ. ನಮ್ಮ ಸಂಸ್ಕೃತಿ ಸಂಸ್ಕಾರದಿಂದ ಬೆಳೆದಿದ್ದೇವೆ ಎಂದು ಸಿಎಂ ಬೊಮ್ಮಾಯಿ ನುಡಿದರು.

Key words: CM Bommai – increase – income limit – scholarship