Friday, September 18, 2026

BDA Apartments

ಬಾಡ ಗ್ರಾಮಕ್ಕೆ ಭೇಟಿ ಕನಕದಾಸರ ಜೀವನ ಚರಿತ್ರೆ ಚಿತ್ರ ವೀಕ್ಷಿಸಿದ ಸಿಎಂ ಬಸವರ...
Home Front Page ಬಾಡ ಗ್ರಾಮಕ್ಕೆ ಭೇಟಿ ಕನಕದಾಸರ ಜೀವನ ಚರಿತ್ರೆ ಚಿತ್ರ ವೀಕ್ಷಿಸಿದ ಸಿಎಂ ಬಸವರಾಜ ಬೊಮ್ಮಾಯಿ.

ಬಾಡ ಗ್ರಾಮಕ್ಕೆ ಭೇಟಿ ಕನಕದಾಸರ ಜೀವನ ಚರಿತ್ರೆ ಚಿತ್ರ ವೀಕ್ಷಿಸಿದ ಸಿಎಂ ಬಸವರಾಜ ಬೊಮ್ಮಾಯಿ.

ಹಾವೇರಿ,ಅಕ್ಟೋಬರ್,28,2021(www.justkannada.in):  ಕನಕದಾಸರ ಜನ್ಮಸ್ಥಳ ಬಾಡ ಗ್ರಾಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಕನಕದಾಸರ ಜೀವನ ಚರಿತ್ರೆಯ ಚಿತ್ರ ವೀಕ್ಷಣೆ ಮಾಡಿದರು.

ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲ್ಲೂಕಿನ ಬಾಡ ಗ್ರಾಮ, ಕನಕದಾಸರ ಜನ್ಮಸ್ಥಳಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಕನಕದಾಸರ ಜೀವನ ಚರಿತ್ರೆಯ ಚಿತ್ರ ವೀಕ್ಷಣೆ ಮಾಡಿದ್ದು ಸಿಎಂ ಗೆ ಸಚಿವ ಡಾ.ಕೆ.ಸುಧಾಕರ್ ಸಾಥ್ ನೀಡಿದರು.

ನಿನ್ನೆವರೆಗೂ ಸಿಎಂ ಬಸವರಾಜ ಬೊಮ್ಮಾಯಿ ಉಪಚುನಾವಣೆ ಪ್ರಚಾರದಲ್ಲಿ ತೊಡಗಿದ್ದರು. ಈ ವೇಳೆ ವಿಪಕ್ಷ ನಾಯಕ ಸಿದ್ಧರಾಮಯ್ಯ , ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ನಡುವೆ ಕಂಬಳಿ ಕುರಿತು ವಾಕ್ಸಮರವೇ ನಡೆದಿತ್ತು. ಕಂಬಳಿ ಕದನದ ಬಳಿಕ ಕನಕದಾಸರ ಜನ್ಮಸ್ಥಳಕ್ಕೆ ಸಿಎಂ ಬೊಮ್ಮಾಯಿ ಭೇಟಿ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

Key words: CM -Basavaraja Bommai-visited – village –Bada- biography – Kanakadasa.