ಆಂದೋಲನ 50 ಸಾರ್ಥಕ ಪಯಣಕ್ಕೆ ನಾಳೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ.

ಮೈಸೂರು,ಜುಲೈ,5,2022(www.justkannada.in): ಆಂದೋಲನ ದಿನ ಪತ್ರಿಕೆಗೆ 50ರ ತುಂಬು ಸಂಭ್ರಮ. ಈ ಹಿನ್ನೆಲೆಯಲ್ಲಿ ಜುಲೈ6( ನಾಳೆ) ಸಂಜೆ 4 ಗಂಟೆಗೆ ಹುಣಸೂರು ರಸ್ತೆಯ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿರುವ ಘಟಿಕೋತ್ಸವ ಭವನದಲ್ಲಿ ೫೦ನೇ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಆಂದೋಲನ’ ಪತ್ರಿಕಯ ಸಹ ಸಂಸ್ಥಾಪಕರಾದ ನಿರ್ಮಲ ಕೋಟಿ, ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ, ಹಿರಿಯ ಪತ್ರಕರ್ತರಾದ ಪಿ. ಸಾಯಿನಾಥ್, ಖ್ಯಾತ ನಟ ಡಾ.ಶಿವರಾಜ್‌ ಕುಮಾರ್, ಹಿರಿಯ ಸಾಹಿತಿ ದೇವನೂರ ಮಹಾದೇವ, ಹಿರಿಯ ಸಮಾಜವಾದ ಪ. ಮಲ್ಲೇಶ್ ಗಣ್ಯರು ವೇದಿಕೆಯನ್ನು ಅಲಂಕರಿಸುತ್ತಿದ್ದಾರೆ.

ಇದೇ ವೇಳೆ ಆಂದೋಲನ ಪತ್ರಿಕೆಯ ಸಂಸ್ಥಾಪಕ ಸಂಪಾದಕರಾದ ರಾಜಶೇಖರ ಕೋಟಿ ಅವರ ಅಂಕಣಗಳ ಸಂಗ್ರಹವನ್ನು ಹೊತ್ತ ‘ಇದ್ದದ್ದು ಇದ್ಹಾಂಗ’ಎಂಬ ಪುಸ್ತಕವನ್ನು ಹೊರತರಲಾಗುತ್ತಿದೆ. ಇದರ ಜೊತೆಗೆ ‘ಆಂದೋಲನ’ ಡಾಕ್ಯುಮೆಂಟರಿ ಬಿಡುಗಡೆಯಾಗಲಿದೆ.

Key words: CM Basavaraja Bommai -tomorrow – 50th anniversary -andolana