Saturday, September 19, 2026

BDA Apartments

ಇಂದು ರಾಜ್ಯ ಬಜೆಟ್: ಸಿಎಂ ಬಸವರಾಜ ಬೊಮ್ಮಾಯಿ ಮನೆ ಮುಂದೆ ಪ್ರತಿಭಟನೆ BDA JK_Adv BDA Adv
Home Front Page  ಇಂದು ರಾಜ್ಯ ಬಜೆಟ್: ಸಿಎಂ ಬಸವರಾಜ ಬೊಮ್ಮಾಯಿ ಮನೆ ಮುಂದೆ ಪ್ರತಿಭಟನೆ.

 ಇಂದು ರಾಜ್ಯ ಬಜೆಟ್: ಸಿಎಂ ಬಸವರಾಜ ಬೊಮ್ಮಾಯಿ ಮನೆ ಮುಂದೆ ಪ್ರತಿಭಟನೆ.

ಬೆಂಗಳೂರು,ಮಾರ್ಚ್,4,2022(www.justkannada.in):  ಇಂದು ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಚೊಚ್ಚಲ ಬಜೆಟ್ ಮಂಡನೆ ಮಾಡಲಿದ್ದಾರೆ.  ಇದಕ್ಕೂ ಮುನ್ನವೇ ಸಿಎಂ ಬೊಮ್ಮಾಯಿಗೆ ಪ್ರತಿಭಟನೆ ಬಿಸಿ ತಟ್ಟಿದೆ.

ಹೌದು ಪೊಲೀಸರಿಗೆ ನ್ಯಾಯ ಕೊಡಿಸುವಂತೆ ಒತ್ತಾಯಿಸಿ  ಸಿಎಂ ಬಸವರಾಜ ಬೊಮ್ಮಾಯಿ ಮನೆ ಮುಂದೆ ವಂದೇಮಾತರಂ ಸಮಾಜಸೇವೆ ಸಂಘಟನೆ ಪ್ರತಿಭಟನೆ  ನಡೆಸಿತು.

ಪ್ರಮೋಷನ್ ವಿಳಂಬದ ಬಗ್ಗೆ ಮತ್ತು ಸಂಬಳ ತಾರತಮ್ಯ ಕುರಿತು ಪೊಲೀಸರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ವಂದೇಮಾತರಂ ಸಮಾಜಸೇವೆ ಸಂಘಟನೆ ಬೆಂಗಳೂರಿನ ಆರ್​ಟಿ ನಗರದ ಸಿಎಂ ನಿವಾಸದ ಬಳಿ ಧರಣಿ  ನಡೆಸಿತು.

ಪೊಲೀಸರಿಗೆ ಅನೇಕ ವರ್ಷಗಳಿಂದ ಪ್ರೊಮೋಷನ್ ಆಗಿಲ್ಲ. ಸಂಬಳದಲ್ಲೂ ಅನ್ಯಾಯ ಆಗಿದೆ. ಬಜೆಟ್ ನಲ್ಲಿ ಇದನ್ನ ಸರಿಪಡಿಸುವಂತೆ ವಂದೇಮಾತರಂ ಸಮಾಜಸೇವೆ ಸಂಘಟನೆ  ಅಧ್ಯಕ್ಷ ಶಿವಕುಮಾರ್ ಸಿಎಂ ಬಸವರಾಜ ಬೊಮ್ಮಾಯಿಗೆ ಆಗ್ರಹಿಸಿದರು.

Key words: CM -Basavaraja bommai- protests – house