Sunday, August 30, 2026

BDA Apartments

Home Front Page ಮಾಜಿ ಸಿಎಂ ಬಿಎಸ್ ವೈ ಭೇಟಿ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ, ನೂತನ ಸಚಿವರಾಗಲಿರುವ ಶಾಸಕರು.

ಮಾಜಿ ಸಿಎಂ ಬಿಎಸ್ ವೈ ಭೇಟಿ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ, ನೂತನ ಸಚಿವರಾಗಲಿರುವ ಶಾಸಕರು.

ಬೆಂಗಳೂರು,ಆಗಸ್ಟ್,4,2021(www.justkannada.in):  ರಾಜ್ಯ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರಕ್ಕೆ ಕ್ಷಣಗಣನೆ ಆರಂಭವಾಗಿದ್ದು ಈ ಮಧ್ಯೆ ಮಾಜಿ ಸಿಎಂ  ಬಿಎಸ್ ಯಡಿಯೂರಪ್ಪ ಅವರನ್ನ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ನೂತನ ಸಚಿವರಾಗಲಿರುವ ಶಾಸಕರು ಭೇಟಿ ಮಾಡಿದ್ದಾರೆ.

ಕಾವೇರಿ ನಿವಾಸದಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪರನ್ನ ಎಂ ಬಸವರಾಜ ಬೊಮ್ಮಾಯಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ನೂತನಸಚಿವರಾಗಲಿರುವ ಶಾಸಕರಾದ ಆರ್.ಅಶೋಕ್, ಗೋವಿಂದ ಕಾರಜೋಳ, ಬಿಸಿ ಪಾಟೀಲ್, ಎಸ್ ಟಿ ಸೋಮಶೇಖರ್, ಮುರುಗೇಶ್ ನಿರಾಣಿ, ಡಾ.ಕೆ ಸುಧಾಕರ್, ವಿ.ಸೋಮಣ್ಣ, ಪ್ರಭು ಚೌಹಾಣ್ ಭೇಟಿ ಮಾಡಿದರು.

ಇದೇ ವೇಳೆ ನೂತನ ಸಚಿವರ ಪಟ್ಟಿಯನ್ನ ಸಿಎಂ ಬಸವರಾಜ ಬೊಮ್ಮಾಯಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪಗೆ ನೀಡಿದರು. ಇಂದು ಮಧ್ಯಾಹ್ನ 2.15ಕ್ಕೆ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ.

Key words: CM Basavaraja Bommai- MLAs – new ministers-meet- former CM- BS yeddyurappa