ಹಿರಿಯ ವಕೀಲ ಫಾಲಿ ಎಸ್ ನಾರಿಮನ್ ಭೇಟಿಯಾದ ಸಿಎಂ ಬಸವರಾಜ ಬೊಮ್ಮಾಯಿ.

ನವದೆಹಲಿ,ನವೆಂಬರ್,30,2022(www.justkannada.in): ಹಿರಿಯ ವಕೀಲ ಫಾಲಿ ಎಸ್ ನಾರಿಮನ್ ಅವರನ್ನ ಸಿಎಂ ಬಸವರಾಜ ಬೊಮ್ಮಾಯಿ ಭೇಟಿಯಾಗಿ ಚರ್ಚಿಸಿದರು.

ಫಾಲಿ ನಾರಿಮನ್ ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಇದೊಂದು ಸೌಜನ್ಯದ ಭೇಟಿ.  ರಾಜ್ಯಕ್ಕಾಗಿ 5 ದಶಕಗಳ ಕಾಲ ನಾರಿಮನ್ ಸೇವೆ ಸಲ್ಲಿಸಿದ್ದಾರೆ.  ಈಗಲೂ ನಾರಿಮನ್ ಅವರ ಸಲಹೆ ಸೂಚನೆಗೆ ಮೌಲ್ಯವಿದೆ. ಗಡಿ ಜಲ ವಿವಾದ ಬಗ್ಗೆ ಯಾವುದೇ ಚರ್ಚೆ ಮಾಡಿಲ್ಲ ಎಂದರು.

ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ ಸಂಬಂಧ  ಇಂದು ವಿಚಾರಣೆ ನಡೆಯುತ್ತೋ ಇಲ್ಲವೋ ನೋಡೋಣ. ಎರಡ್ಮೂರು ಗಂಟೆಗಳ ಬಳಿಕ ಎಲ್ಲವೂ ಗೊತ್ತಾಗಲಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಪರ ಪಾಲಿ ಎಸ್ ನಾರಿಮನ್  ವಾದ ಮಂಡಿಸಿದ್ಧರು.

Key words: CM- Basavaraja Bommai- met- senior advocate -Fali S Nariman.