ನಂದಿಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ರೋಪ್ ವೇಗೆ ಶಂಕುಸ್ಥಾಪನೆ ನೆರವೇರಿಸಿದ ಸಿಎಂ ಬಸವರಾಜ ಬೊಮ್ಮಾಯಿ.

ಚಿಕ್ಕಬಳ್ಳಾಪುರ,ಮಾರ್ಚ್,27,2023(www.justkannada.in):  94 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ನಂದಿಹಿಲ್ಸ್ ರೋಪ್ ವೇಗೆ ಸಿಎಂ ಬಸವರಾಜ ಬೊಮ್ಮಾಯಿ ಶಂಕು ಸ್ಥಾಪನೆ ಮಾಡಿದರು.

ಇದೇ ವೇಳೆ ಸರ್ಕಾರಿ ಮೆಡಿಕಲ್ ಕಾಲೇಜು ಕಟ್ಟಡವನ್ನ ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು . ಸಿಎಂ ಬೊಮ್ಮಾಯಿಯವರಿಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸಾಥ್ ನೀಡಿದರು.

ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಮೆಡಿಕಲ್ ಕಾಲೇಜಿಗಾಗಿ  ಸಚಿವ  ಸುಧಾಕರ್ ಹೋರಾಡಿದ್ದಾರೆ. ನಮ್ಮ ಜಿಲ್ಲೆಗೆ ಮೆಡಿಕಲ್ ಕಾಲೇಜು ಆಗಬೇಕೆಂದು ಶ್ರಮಿಸಿದ್ದಾರೆ ಎಂದರು.

ರೈತರ ಸಮ್ಮಾನ್ ಯೋಜನೆಯಡಿ ರೈತರ ಖಾತೆಗೆ ಹಣ ಬಂದಿದೆ. ಮಧ್ಯವರ್ತಿಗಳನ್ನ ದೂರವಿಟ್ಟು ಉತ್ತಮ ಆಡಳಿತ ನಡೆಸುತ್ತಿದ್ದೇವೆ.  ಚಿಕ್ಕಬಳ್ಳಾಪುರ ಜಿಲ್ಲೆಯೆಲ್ಲಿ 167 ಕೋಟಿ  ರೂ.  ರೈತರ ಖಾತೆಗೆ ನೇರವಾಗಿ ತಲುಪಿದೆ. ರೈತರ ಏಳಿಗೆಗಾಗಿ ಕೇಂದ್ರ ರಾಜ್ಯ ಸರ್ಕಾರ ಶ್ರಮಿಸಿದೆ. ಪ್ರಜೆಗಳ ಬದುಕು ಉತ್ತಮವಾಗಿರಬೇಕೆಂದು ನಮ್ಮ ಉದ್ದೇಶ. ರೈತರು ಕಾರ್ಮಿಕರು ಮಹಿಳೆಯರ ಕಲ್ಯಾಣವೇ ನಮ್ಮ ಗುರಿ.  ಮೋದಿ ಮೆಡಿಕಲ್ ಕಾಲೇಜುಗಳ ಹೆಚ್ಚಳದ ಕನಸು ಕಂಡಿದ್ದರು. ಚಿಕ್ಕಮಗಳುರು ಯಾದಗಿರಿಗೂ ಮೆಡಿಕಲ್ ಕಾಲೇಜು ಸಿಕ್ಕಿದೆ ಎಂದು ಸಿಂ ಬಸವರಾಜ ಬೊಮ್ಮಾಯಿ ತಿಳಿಸಿದರು.

Key words: CM Basavaraja Bommai- laid – foundation- stone – ropeway Nandi hills.