ಇಂದು ಸಿಎಂ ಬಸವರಾಜ ಬೊಮ್ಮಾಯಿ ದೆಹಲಿಗೆ: ಒಂದು ವಾರದಲ್ಲಿ ಸಂಪುಟ ವಿಸ್ತರಣೆ- ಆರ್.ಅಶೋಕ್.

ಬೆಂಗಳೂರು,ಜುಲೈ,28,2021(www.justkannada.in): ಪ್ರಧಾನಿ ಮೋದಿ ಭೇಟಿಗಾಗಿ ಇಂದು ಸಂಜೆ 4 ಗಂಟೆಗೆ ನೂತನ ಸಿಎಂ ಬಸವರಾಜ ಬೊಮ್ಮಾಯಿ ದೆಹಲಿಗೆ ತೆರಳಲಿದ್ದಾರೆ ಎಂದು ಮಾಜಿ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.jk

ನೂತನ ಸಿಎಂ ಆಗಿ ಬಸವರಾಜ ಬೊಮ್ಮಾಯಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ರಾಜಭವನದ ಬಳಿ ಮಾಧ್ಯಮಗಳ ಜತೆ ಮಾತನಾಡಿದ ಆರ್.ಅಶೋಕ್, ಒಂದು ವಾರದೊಳಗೆ ಸಚಿವ ಸಂಪುಟ ವಿಸ್ತರಣೆಯಾಗಿದೆ.  ಹಳಬರು ಹೊಸಬರು ಎಂದು ತೀರ್ಮಾನಿಸಲ್ಲ. ಅವರು ಮಾಡಿದ ಕೆಲಸ ನೋಡಿ ಸಚಿವ ಸ್ಥಾನ ನೀಡಲಿದ್ದಾರೆ ಎಂದರು.

ಸಿಎಂ  ರೇಸ್ ನಲ್ಲಿ ನನ್ನ ಹೆಸರು ಇದ್ದಿದ್ದು ನಿಜ. ಬೇರೆ ಬೇರೆ ಕಾರಣಗಳಿಂದ ಬಸವರಾಜ ಬೊಮ್ಮಾಯಿ ಆಯ್ಕೆ ಆಗಿದೆ. ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದು, ಸಂತೋಷ.  ನಾನು ಸಿಎಂ ಆದಷ್ಟೆ ಖುಷಿಯಾಗಿದೆ.  ನಾವು ಮೊದಲೇ ಮಾತನಾಡಿಕೊಂಡಿದ್ದುವು ಯಾರೇ ಸಿಎಂ ಆದರೂ ಒಂದೇ ಎಂದು ಮಾತನಾಡಿಕೊಂಡಿದ್ದವು ಎಂದರು.

Key words: CM- Basavaraja Bommai – Delhi -today— R. Ashok