ಕಾಂಗ್ರೆಸ್ ನಾಯಕರ ಆರೋಪಕ್ಕೆ ವಿಧಾನಸಭೆಯಲ್ಲೇ ಉತ್ತರ ನೀಡುವೆ- ಸಿಎಂ ಬಸವರಾಜ ಬೊಮ್ಮಾಯಿ.

ಬೆಂಗಳೂರು,ಮಾರ್ಚ್,5,2022(www.justkannada.in):  ಕಾಂಗ್ರೆಸ್ ಪಾದಯಾತ್ರೆ ಮಾಡಿದ್ದಕ್ಕೆ ಮೇಕೆದಾಟು ಯೋಜನೆಗೆ ಬಜೆಟ್ ನಲ್ಲಿ 1000 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ಹೇಳಿಕೆ ನೀಡಿರುವ ಕಾಂಗ್ರೆಸ್ ಗೆ ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿ ಸಿಎಂ ಬಸವರಾಜ ಬೊಮ್ಮಾಯಿ, ಈ  ಬಗ್ಗೆ ವಿಧಾಣಸಭೆಯಲ್ಲೇ  ಅವರಿಗೆ ತಕ್ಕ ಉತ್ತರ ನೀಡುತ್ತೇನೆ ಎಂದಿದ್ದಾರೆ.

ಇನ್ನು ಉಕ್ರೇನ್ ನಿಂದ ಕನ್ನಡಿಗರನ್ನ ಕರೆತರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ಉಕ್ರೇನ್ ನಿಂದ  ಹಲವು ವಿದ್ಯಾರ್ಥಿಗಳನ್ನ ಕರೆತರಲಾಗಿದೆ ಗಡಿ ಭಾಗಕ್ಕೆ ಆಗಮಿಸುತ್ತಿರವವರನ್ನ ಕರೆತರಲಾಗಿದೆ.  ಆದರೂ ಕೆಲವು ಕಡೆ ಬರಲು ಆಗದ ಪರಿಸ್ಥಿತಿ ಇದೆ.  ಅಲ್ಲಿರುವವರನ್ನ ಸಂಪರ್ಕ ಸಾಧಿಸಿ ಕರೆತರುವ ಪ್ರಯತ್ನ ಮಾಡುತ್ತೇವೆ.  ನಾವು ಕೂಡ ಭಾರತದ ರಾಯಭಾರಿ  ಗಡಿಯಲ್ಲಿರುವ ನಮ್ಮ ಮಂತ್ರಿಗಳ ಜತೆ ಮಾತನಾಡುತ್ತೇವೆ ಎಂದರು.

Key words: CM-Basavaraj bommai-congress

ENGLISH SUMMARY…

I will reply to the Cong. allegations, in the assembly: CM Bommai
Bengaluru, March 5, 2022 (www.justkannada.in): Responding to the Karnataka Congress party’s statement that the BJP government has provided Rs. 1,000 crore grants to the Mekedatu project because Congress padayatra, Chief Minister Basavaraj Bommai today said, he will answer them in the assembly itself.
Replying to a question on bringing back Kannadigas who are stranded in Ukraine, the Chief Minister said that all those people who are arriving at the Ukraine border are being brought back. “However a few of them are still stranded in several places. We are making efforts to contact them and bring them back. We are constantly in touch with the Indian Embassy and the Indian ministers who are in the Ukraine border,” he explained.
Keywords: Chief Minister/ Basavaraj Bommai/ Congress/ allegations