ಬಾಲಚಂದ್ರ ಜಾರಕಿಹೊಳಿಗೆ ಸಚಿವ ಸ್ಥಾನ ನೀಡುವಂತೆ ಸಿಎಂಗೆ ಮನವಿ- ಶಾಸಕ ಮಹೇಶ್ ಕುಮುಟಳ್ಳಿ….

ಬೆಳಗಾವಿ,ಮಾರ್ಚ್,10,2021(www.justkannada.in):  ಶಾಸಕ ಬಾಲಚಂದ್ರ ಜಾರಕಿಹೊಳಿಗೆ ಸಚಿವ ಸ್ಥಾನ ನೀಡುವಂತೆ ಸಿಎಂಗೆ ಮನವಿ ಮಾಡಿದ್ದೇವೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಆಪ್ತರಾದ ಶಾಸಕ ಮಹೇಶ್ ಕುಮುಟಳ್ಳಿ ತಿಳಿಸಿದರು.jk

ರಾಸಲೀಲೆ ಸಿಡಿ ಬಿಡುಗಡೆಯಾದ ಹಿನ್ನೆಲೆ ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಾಲಚಂದ್ರ ಜಾರಕಿಹೊಳಿಗೆ ಸಚಿವ ಸ್ಥಾನ ನೀಡುವಂತೆ ಕೂಗು ಕೇಳಿ ಬಂದಿದೆ. ಈ ಕುರಿತು ಮಾತನಾಡಿರುವ ಶಾಸಕ ಮಹೇಶ್ ಕುಮುಟಳ್ಳಿ, ಶಾಸಕ ಬಾಲಚಂದ್ರ ಜಾರಕಿಹೊಳಿಗೆ ಸಚಿವ ಸ್ಥಾನ ನೀಡುವಂತೆ 15 ರಿಂದ 16 ಶಾಸಕರು ಸಿಎಂಗೆ ಮನವಿ ಮಾಡಿದ್ದೇವೆ. ಈ ಬಗ್ಗೆ ಹೈಕಮಾಂಡ್ ನಿರ್ಧರಿಸಲಿದೆ ಎಂದರು.CM - Balachandra jarakihali -given - ministerial position-MLA-Mahesh Kumutalli.

ಇನ್ನು ರಮೇಶ್ ಜಾರಕಿಹೊಳಿ ದೂರು ಕೊಡುವ ಮಾಹಿತಿ ಇಲ್ಲ. ಅವರಿಗೆ ನೈತಿಕವಾಗಿ ಬೆಂಬಲ ನೀಡುತ್ತೇವೆ. ಯಾವುದೇ ಸಂದರ್ಭದಲ್ಲೂ ಬೆಂಬಲ ನೀಡುತ್ತೇವೆ ಎಂದರು.

Key words: CM – Balachandra jarakihali -given – ministerial position-MLA-Mahesh Kumutalli.