ಅನಧಿಕೃತ ದೇಗುಲಗಳ ತೆರವು ವಿಚಾರ: ಶೀಘ್ರವೇ ಸರ್ಕಾರದಿಂದ ಸ್ಪಷ್ಟ ನಿರ್ಧಾರ- ಸಚಿವ ಆರ್. ಅಶೋಕ್.

ಬೆಂಗಳೂರು,ಸೆಪ್ಟಂಬರ್,14,2021(www.justkannada.in):  ರಾಜ್ಯದಲ್ಲಿ ಅನಧಿಕೃತ ದೇವಾಲಯಗಳ ತೆರವು ವಿಚಾರ ಸಂಬಂಧ ಶೀಘ್ರವೇ ಸರ್ಕಾರದಿಂದ ಸ್ಪಷ್ಟ ನಿರ್ಧಾರ ಮಾಡಲಾಗುತ್ತದೆ  ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಸಚಿವ ಆರ್.ಅಶೋಕ್, ಜನರ ಭಾವನೆಗೆ ಧಕ್ಕೆ ತರದಂತೆ ದೇಗುಲ ತೆರವಿಗೆ ಸೂಚನೆ ನೀಡಲಾಗುತ್ತದೆ. ಏಕಾಏಕಿ ದೇಗುಲ ತೆರುವುಗೊಳಿಸುವುದು ಸರಿಯಲ್ಲ. ಈ ವಿಚಾರವಾಗಿ ಸಿಎಂ ಬೊಮ್ಮಾಯಿ ಅವರ ಜತೆ ಚರ್ಚಿಸಿದ್ದೇನೆ. ಸುಪ್ರೀಂಕೋರ್ಟ್ ಆದೇಶ ಪಾಲಿಸಬೇಕು ಆದರೆ ಜನರ ಭಾವನೆಗೆ ಧಕ್ಕೆಯಾಗದಂತೆ ಪಾಲಿಸಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗುತ್ತದೆ ಎಂದರು.

ಜಿಲ್ಲಾಧಿಕಾರಿಗಳು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಜತೆ ನಾನೇ ಮಾತುಕತೆ ನಡೆಸುತ್ತೇನೆ.ಸರ್ಕಾರದಿಂದ ನಿರ್ದೇಶನ ಬರುವವರೆಗೂ ಸ್ಥಗಿತ ಮಾಡಲು ಸೂಚನೆ ನೀಡಲಾಗುವುದು ಎಂದು ಹೇಳಿದರು.

ಕೆಲವು ಕಡೆ ದೇವಸ್ಥಾನಗಳನ್ನು ತೆರವು ಮಾಡುತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ನ್ಯಾಯಾಲಯದ ನಿರ್ದೇಶನದ ಬಗ್ಗೆ ಸರ್ಕಾರ ಕೂಲಂಕಷವಾಗಿ ಪರಿಶೀಲನೆ ನಡೆಸಲಿದೆ. ಸರ್ಕಾರ ನಿರ್ದೇಶನ ನೀಡುವವರೆಗೂ ತೆರವುಗೊಳಿಸುವ ಅಗತ್ಯವಿಲ್ಲ. ಕೂಡಲೇ ಜಿಲ್ಲಾಡಳಿತಕ್ಕೆ ಸೂಚನೆ ನೀಡುವುದಾಗಿ  ಸಚಿವ ಆರ್.ಅಶೋಕ್ ತಿಳಿಸಿದರು.

Key words: Clearing – unofficial –temples-decision –government- soon-Minister -R. Ashok.

ENGLISH SUMMARY….

Eviction of illegal temples: Govt. to announce decision soon – Minister R. Ashok
Bengaluru, September 14, 2021 (www.justkannada.in): Revenue Minister R. AShok has informed that the State Government will announce its decision soon concerning the eviction of illegal temples in the State.
Speaking about this today he informed that instructions will be given to evict the temples without hurting the religious sentiments of the people. “It is incorrect to evict the temples all of a sudden. I have discussed about this with the Chief Minister Basavaraj Bommai. However, we should follow the Hon’ble Supreme Court orders, without hurting the sentiments of the people. Instructions will be given to the Deputy Commissioner regarding this soon,” he added.
He informed that he would speak to the Revenue Department officials and the Deputy Commissioner personally and give instructions to stop the eviction process till further government orders.
“People have expressed their severe opposition and anger against the eviction of temples at certain places. Thorough verification is being done regarding the Hon’ble Supreme Court orders. However, there is no need for eviction till further government orders. Instructions will be given to the district administration soon,” he explained.
Keywords: Revenue Minister/ R. Ashok/ temple/ demolition/ eviction/ status quo/ government orders