ಮೈಸೂರು, ಡಿ.೨೦,೨೦೨೫: ರಾಷ್ಟ್ರ ಮಟ್ಟದಲ್ಲಿ ನಡೆಯುವ ಕಾಮನ್ ಲಾ ಅಡ್ಮಿಷನ್ ಟೆಸ್ಟ್ನಲ್ಲಿ ಮೈಸೂರಿನ ಕಾನೂನು ವಿದ್ಯಾರ್ಥಿ ರೋಹನ್ ವಿ ಗಂಗಡ್ಕರ್ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿದ್ದಾರೆ.
ರಾಷ್ಟ್ರಮಟ್ಟದಲ್ಲಿ ಒಟ್ಟು 737 ಸೀಟುಗಳಿದ್ದು ರೋಹನ್ 36ನೇ ರ್ಯಾಂಕ್ ಗಳಿಸಿದ್ದಾರೆ. ಜತೆಗೆ ರಾಜ್ಯ ಮಟ್ಟದಲ್ಲಿ 10 ಸೀಟುಗಳಿದ್ದು 2ನೇ ರ್ಯಾಂಕ್ ಪಡೆದಿದ್ದಾರೆ. ಈ ಪರೀಕ್ಷೆಯಲ್ಲಿ ವಿವಿಧ ರಾಜ್ಯದ ಸಾವಿರಾರು ವಿದ್ಯಾರ್ಥಿಗಳು ಭಾಗಿಯಾಗಿದ್ದರು.
ಯಾವುದೇ ವಿಶೇಷ ತರಬೇತಿ ಹಾಗೂ ಕೋಚಿಂಗ್ ಕ್ಲಾಸ್ ಗೂ ಸೇರದೆ, ಸ್ವಯಂ ಪ್ರತಿಭೆ ಮೇಲೆ ಪರೀಕ್ಷೆ ಎದುರಿಸಿ ಉತ್ತಮ ದರ್ಜೆಯಲ್ಲಿ ತೇರ್ಗಡೆ ಹೊಂದುವ ಮೂಲಕ ನಗರಕ್ಕೆ ಕೀರ್ತಿ ತಂದಿದ್ದಾರೆ.

ರೋಹನ್ ವಿ ಗಂಗಡ್ಕರ್ ಹಿರಿಯ ವಕೀಲರು ಹಾಗೂ ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ ಗೌರವ ಸಂಪಾದಕ ಎಚ್ ಎನ್ ವೆಂಕಟೇಶ್ ಹಾಗೂ ಕೆ ಎ ಎಸ್ ಅಧಿಕಾರಿ ಮಂಜುಳಾ ಅವರ ಪುತ್ರ. ರೋಹನ್ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಮೊದಲ ಸ್ಥಾನ ಗಳಿಸಿದ್ದರು. ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 600ಕ್ಕೆ 600 ಅಂಕ ಗಳಿಸಿದ್ದರು.
ಸದ್ಯ ಮೈಸೂರು ಜೆ ಎಸ್ ಎಸ್ ಕಾನೂನು ಕಾಲೇಜಿನಲ್ಲಿ ಓದುತ್ತಿರುವ ರೋಹನ್ ಹಲವು ರಾಷ್ಟ್ರ ಮಟ್ಟದ ಮೂಟ್ ಕೋರ್ಟ್ ಸ್ಪರ್ಧೆಯಲ್ಲಿ ಭಾಗವಹಿಸಿ ಮೊದಲ ಸ್ಥಾನ ಗಳಿಸಿ ರಾಜ್ಯ ಹಾಗೂ ಮೈಸೂರು ಜಿಲ್ಲೆಗೆ ಕೀರ್ತಿ ತಂದುಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ, ಹೈಕೋರ್ಟ್ ಸುಪ್ರೀಂ ಕೋರ್ಟ್ ಜಿಲ್ಲಾ ಹಾಗೂ ರಾಜ್ಯ ಪೊಲೀಸ್ ಸೈಬರ್ ಕಚೇರಿಯಲ್ಲಿ ಯಶಸ್ವಿಯಾಗಿ ಇಂಟೆನ್ಶಿಪ್ ಪೂರ್ಣಗೊಳಿಸಿದ್ದಾರೆ.

ಜತೆಗೆ ತಂದೆ ಎಚ್ ಎನ್ ವೆಂಕಟೇಶ್ ಅವರ ಲಾಗೈಡ್ ಪತ್ರಿಕೆ ಆನ್ಲೈನ್ ಸ್ವರೂಪದಲ್ಲಿ ಹೊರಬರಲು ಹಾಗೂ ಅದರಲ್ಲಿ ಜನ ಸಾಮಾನ್ಯರಿಗೆ ಬೇಕಾದ ಲೇಖನಗಳು ಹಾಗೂ ಮಹತ್ವದ ತೀರ್ಪುಗಳ ಲೇಖನ ಹೊರತರುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.
ರೋಹನ್ ಮುಂದೆ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುವ ಆಕಾಂಕ್ಷೆ ಹೊಂದಿದ್ದಾರೆ. ಅವರ ಭವಿಷ್ಯಕ್ಕೆ ಹಲವರು ಶುಭ ಹಾರೈಸಿದ್ದಾರೆ.
key words: National Level, “Common Law Admission Test”, CLAT, Mysore Law student, Rohan V Gangadkar, secured 2nd position, in the state.

SUMMARY:
National Level “Common Law Admission Test”: Mysore Law student Rohan V Gangadkar secured 2nd position in the state.

Mysore law student Rohan V Gangadkar has secured second position in the state in the Common Law Admission Test held at the national level. Rohan has secured 36th rank out of 737 seats at the national level. He has also secured 2nd rank out of 10 seats at the state level. Thousands of students from different states participated in this exam.





