ಬೀದರ್,ಜನವರಿ,5,2026 (www.justkannada.in): ಬೀದರ್ ಕೆಡಿಪಿ ಸಭೆಯಲ್ಲಿ ಹುಮ್ನಾಬಾದ್ ಬಿಜೆಪಿ ಶಾಸಕ ಸಿದ್ದು ಪಾಟೀಲ್ ಮತ್ತು ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಭೀಮರಾವ್ ಪಾಟೀಲ್ ನಡುವೆ ಗಲಾಟೆ ನಡೆದು ಹೊಡೆದಾಡುವ ಹಂತಕ್ಕೆ ತಲುಪಿದ ಘಟನೆ ಇಂದು ನಡೆದಿದೆ.
ಸಚಿವ ಈಶ್ವರ್ ಖಂಡ್ರೆ ನೇತೃತ್ವದಲ್ಲಿ ಬೀದರ್ ಜಿಲ್ಲಾ ಪಂಚಾಯತ್ ಆವರಣದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯುತ್ತಿತ್ತು. ಈ ವೇಳೆ ಹುಮ್ನಾಬಾದ್ ಬಿಜೆಪಿ ಶಾಸಕ ಸಿದ್ದು ಪಾಟೀಲ್ ಮತ್ತು ಕಾಂಗ್ರೆಸ್ ಎಂಎಲ್ ಸಿ ಭೀಮರಾವ್ ಪಾಟೀಲ್ ನಡುವೆ ಕಿತ್ತಾಟ ನಡೆದಿದ್ದು ಕೈ ಕೈ ಮಿಲಾಯಿಸಿಕೊಂಡಿದ್ದಾರೆ.
ಅರಣ್ಯಭೂಮಿ ಒತ್ತುವರಿ ವಿಚಾರಕ್ಕೆ ಗಲಾಟೆ ನಡೆದಿದ್ದು ಹುಮ್ನಾಬಾದ್ ನಲ್ಲಿ ಅರಣ್ಯ ಭೂಮಿ ಒತ್ತುವರಿಯಾಗಿದೆ ಎಂದು ಶಾಸಕ ಸಿದ್ದುಪಾಟೀಲ್ ಹೇಳಿದ್ದು ಇದಕ್ಕೆ ಪ್ರತ್ಯುತ್ತರ ನೀಡಿದ ಎಂಎಲ್ ಸಿ ಭೀಮರಾವ್ ಪಾಟೀಲ್ ಒತ್ತುವರಿಯಾಗಿಲ್ಲ ಈಗಲೇ ರಾಜೀನಾಮೆ ನೀಡು ಎಂದಿದ್ದಾರೆ. ಈ ವೇಳೆ ಇಬ್ಬರು ನಾಯಕರ ನಡುವೆ ಕಿತ್ತಾಟವಾಗಿ ಏಕವಚನದಲ್ಲೇ ಬೈದಾಡಿಕೊಂಡಿದ್ದಾರೆ. ಇಬ್ಬರು ನಾಯಕರನ್ನು ಸುಮ್ಮನಿರಿಸಲು ಸಚಿವ ಈಶ್ವರ್ ಖಂಡ್ರೆ ಹರಸಾಹಸ ಪಟ್ಟರು.
Key words: Clashes, between, MLA, MLC, Bidar







