ನವದೆಹಲಿ, ಅಕ್ಟೋಬರ್,6,2025 (www.justkannada.in): ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಬಿ.ಆರ್ ಗವಾಯಿ ಮೇಲೆ ವಕೀಲರೊಬ್ಬರು ಶೂ ಎಸೆದ ಘಟನೆ ಇಂದು ನಡೆದಿದ್ದು ಶೂ ಎಸೆದ ವಕೀಲನನ್ನ ಪೊಲೀಸರು ಬಂಧಿಸಿದ್ದಾರೆ.
ಇಂದು ವಿಚಾರಣೆ ವೇಳೆ ವಕೀಲ ರಾಜಶೇಖರ್ ಕಿಶೋರ್ ಎಂಬುವವರು ಸಿಜೆಐ ಬಿಆರ್ ಗವಾಯಿ ಮೇಲೆ ಶೂ ಎಸೆಯಲು ಪ್ರಯತ್ನಿಸಿದ್ದಾರೆ. ಈ ವೇಳೆ ತಕ್ಷಣ ಅವರನ್ನ ವಶಕ್ಕೆ ಪಡೆದ ಸುಪ್ರೀಂಕೋರ್ಟ್ ನಲ್ಲಿದ್ದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಸನಾತನ ಧರ್ಮಕ್ಕೆ ಅವಮಾನ ಸಹಿಸಲ್ಲ ಎಂದು ವಕೀಲ ಚಿರಾಡಿದ್ದಾರೆ ಎನ್ನಲಾಗಿದೆ. ಘಟನೆ ಕುರಿತು ಪ್ರತಿಕ್ರಿಯಿಸಿರುವ ಮುಖ್ಯನ್ಯಾಯಮೂರ್ತಿ ಬಿ.ಆರ್ ಗವಾಯಿ ಇಂಥಾ ಘಟನೆಗಳಿಂದ ನಾವು ವಿಚಲಿತರಾಗಲ್ಲ ಎಂದಿದ್ದಾರೆ.
Key words: Lawyer throwing shoe, Supreme Court, CJ, BR Gavayi